alex Certify ‘ಲಾಲ್ ಸಿಂಗ್ ಚಡ್ಡಾ’ V/S ‘ಕೆಜಿಎಫ್-2’: ಒಂದೇ ದಿನ ತೆರೆಗೆ ಬರಲು ಸಜ್ಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಲ್ ಸಿಂಗ್ ಚಡ್ಡಾ’ V/S ‘ಕೆಜಿಎಫ್-2’: ಒಂದೇ ದಿನ ತೆರೆಗೆ ಬರಲು ಸಜ್ಜು

ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ದ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಮಾ ಬಿಡುಗಡೆಯನ್ನು ಮತ್ತೆ ಮುಂದೂಡಲ್ಪಟ್ಟಿದೆ.

ಶನಿವಾರ, ಚಿತ್ರದ ಪರಿಷ್ಕೃತ ಬಿಡುಗಡೆ ದಿನಾಂಕವನ್ನು ಹೊಚ್ಚ ಹೊಸ ಪೋಸ್ಟರ್ ಜೊತೆಗೆ ಹಂಚಿಕೊಳ್ಳಲಾಗಿದೆ. ಲಾಲ್ ಸಿಂಗ್ ಚಡ್ಡಾ ಮುಂದಿನ ವರ್ಷ ಏಪ್ರಿಲ್ 14 ರಂದು  ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

ಇನ್ನು, ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್-2 ಕೂಡ ಅಂದೇ ರಿಲೀಸ್ ಆಗುತ್ತಿದ್ದು, ದೊಡ್ಡ ಘರ್ಷಣೆಗೆ ಸಾಕ್ಷಿಯಾಗಲಿದೆ ಅಂತಾನೇ ಹೇಳಲಾಗ್ತಿದೆ.

ನಟಿ ಕರೀನಾ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಹಂಚಿಕೊಂಡಿದ್ದಾರೆ. ಇದು ನಮ್ಮ ಹೊಸ ಪೋಸ್ಟರ್….. ಸಿನಿಮಾ ಬಿಡುಗಡೆಯ ದಿನಾಂಕವನ್ನು ಹಂಚಿಕೊಳ್ಳಲು ಸಂತೋಷಪಡುವುದಾಗಿ ಕರೀನಾ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

ಲಾಲ್ ಸಿಂಗ್ ಚಡ್ಡಾವನ್ನು ಆರಂಭದಲ್ಲಿ ಈ ವರ್ಷದ ಕ್ರಿಸ್‌ಮಸ್‌ನಲ್ಲಿ ಬಿಡುಗಡೆ ಮಾಡಬೇಕಿತ್ತು ಆದರೆ, ನಂತರ ಈ ದಿನಾಂಕವನ್ನು ವ್ಯಾಲೆಂಟೈನ್ಸ್ ಡೇ 2022 ಕ್ಕೆ ಬದಲಾಯಿಸಲಾಯಿತು. ಇದೀಗ ಮತ್ತೆ ಸಿನಿಮಾ ಬಿಡುಗಡೆಯನ್ನು ಏಪ್ರಿಲ್ ವರೆಗೆ ಚಿತ್ರತಂಡ ಮುಂದೂಡಿದೆ.

ಅದ್ವೈತ್ ಚಂದನ್ ನಿರ್ದೇಶಿಸಿದ ಲಾಲ್ ಸಿಂಗ್ ಚಡ್ಡಾ ಸಿನಿಮಾವು ಹಾಲಿವುಡ್ ‘ಕ್ಲಾಸಿಕ್ ಫಾರೆಸ್ಟ್ ಗಂಪ್‌’ನ ಹಿಂದಿ ರಿಮೇಕ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...