ಕೆವೈಸಿ ಪರಿಷ್ಕರಣೆ ನೆಪದಲ್ಲಿ ಮೋಸ ಮಾಡುತ್ತಿರುವ ಅನೇಕ ದೂರುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಸ್ವೀಕರಿಸುತ್ತಿದೆ.
ಸಿಂಧುವಲ್ಲದ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡುವ ಮೂಲಕ ಅಥವಾ ಎಸ್ಎಂಎಸ್, ಇಮೇಲ್ ಇತ್ಯಾದಿಗಳ ಮೂಲಕ ಸಂಪರ್ಕ ಸಾಧಿಸಿ ಗ್ರಾಹಕರ ವೈಯಕ್ತಿಕ ವಿವರಗಳು, ಖಾತೆ, ಲಾಗಿನ್ ವಿವರಗಳು, ಕಾರ್ಡ್ ವಿವರಗಳು, ಪಿನ್, ಓಟಿಪಿ, ಇತ್ಯಾದಿಗಳನ್ನು ಹಂಚಿಕೊಳ್ಳಲು ಕೋರುವುದು ಅಥವಾ ಅನಾಮಿಕ ಲಿಂಕ್ ಒಂದರ ಮೂಲಕ ಕೆವೈಸಿ ಮಾಡಲು ವಂಚಕರು ಕೋರುತ್ತಾರೆ ಎಂದು ಆರ್ಬಿಐ ಎಚ್ಚರಿಕೆ ನೀಡಿದೆ.
ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕ್: ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನ
ಇಂಥ ಸಂಪರ್ಕಗಳ ಮೂಲಕ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದು, ಬ್ಲಾಕ್ ಮಾಡುವುದು ಅಥವಾ ವಜಾಗೊಳಿಸುವ ಸಾಧ್ಯತೆಗಳೂ ಇರುತ್ತವೆ. ಒಮ್ಮೆ ಗ್ರಾಹಕರು ಕರೆ, ಸಂದೇಶ ಅಥವಾ ಅನಾಮಿಕ ಅಪ್ಲಿಕೇಶನ್ ಮೂಲಕ ಮಾಹಿತಿ ಹಂಚಿಕೊಂಡರೆ, ಅಂಥ ಗ್ರಾಹಕರ ಖಾತೆಗಳ ಮೂಲಕ ಅವರಿಗೆ ವಂಚನೆ ಎಸಗುವ ಸಾಧ್ಯತೆಗಳು ಬಹಳ ಇರುತ್ತವೆ ಎಂದು ಕೇಂದ್ರ ಬ್ಯಾಂಕ್ ಮಾಹಿತಿ ನೀಡಿದೆ.
ಈ ಮಾಹಿತಿಗಳನ್ನು ಮಾನ್ಯೀಕರಿಸದ ಜಾಲತಾಣಗಳ ಮೂಲಕ ಹಂಚಿಕೊಳ್ಳಬಾರದು ಹಾಗೂ ಇಂಥ ಯಾವುದೇ ಮನವಿಗಳು ಬಂದಲ್ಲಿ, ಗ್ರಾಹಕರು ತಮ್ಮ ಬ್ಯಾಂಕ್ನ ಶಾಖೆಗಳನ್ನು ಸಂಪರ್ಕಿಸಬೇಕಾಗುತ್ತದೆ.
ಇದೇ ವೇಳೆ ನಿಯಂತ್ರಿತ ಸಂಸ್ಥೆಗಳು ನಿಯಮಿತವಾಗಿ ತಮ್ಮ ಗ್ರಾಹಕರ ಕೆವೈಸಿ ಮಾಡಿಕೊಳ್ಳುತ್ತಿರಬೇಕು ಎಂದ ಆರ್ಬಿಐ, ಈ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಎಂದು ಮೇ 10, 2021ರಲ್ಲಿ ಹೊರಡಿಸಿದ ಸುತ್ತೋಲೆ ಮೂಲಕ ತಿಳಿಸಿತ್ತು.