alex Certify BIG NEWS : ಮತದಾನದ ದಿನ ರಜೆ ಘೋಷಿಸಿದ ‘KSRTC’ , ಹಾಗಾದ್ರೆ ಬಸ್ ಇರುತ್ತೋ.. ಇಲ್ವೋ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಮತದಾನದ ದಿನ ರಜೆ ಘೋಷಿಸಿದ ‘KSRTC’ , ಹಾಗಾದ್ರೆ ಬಸ್ ಇರುತ್ತೋ.. ಇಲ್ವೋ..?

ಬೆಂಗಳೂರು : ದಿನಾಂಕ:26-04-2024 & 07-05-2024 ರಂದು ಕರ್ನಾಟಕ ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆ-2024 ರ ನಿಮಿತ್ತ ರಾಜ್ಯ ಸರ್ಕಾರವು ಉಲ್ಲೇಖಿತ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಅಧಿಸೂಚನೆಯಲ್ಲಿ ಸೂಚಿಸಿರುವ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ರಾಜ್ಯ ಸರ್ಕಾರಿ ಕಛೇರಿಗಳಿಗೆ ನೆಗೋಷಿಯೇಬಲ್ ಇನ್ನುಮೆಂಟ್ಸ್ ಆಕ್ಟ್ 1881 ರ ಪ್ರಕಾರ ಸಾರ್ವತ್ರಿಕ ರಜೆಯನ್ನು ಸರ್ಕಾರವು ಘೋಷಿಸಿದೆ ಹಾಗೂ 1951 ರ ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 135 (ಬಿ) ರಡಿಯಲ್ಲಿ ವೇತನ ಸಹಿತ ರಜೆ ನೀಡಲು ಆದೇಶಿಸಿದೆ.

ಕ.ರಾ.ರ.ಸಾ.ನಿಗಮವು ಅಗತ್ಯ ಸೇವೆಯಡಿಯಲ್ಲಿ ಬರುವುದರಿಂದ ದಿನಾಂಕ:26/04/2024 ಹಾಗೂ ದಿನಾಂಕ:07/05/2024 ರಂದು ನಡೆಯುವ ಲೋಕಸಭಾ ಚುನಾವಣೆ ದಿನದಂದು ಆಯಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ನಿಗಮದ ಕೇಂದ್ರ ಕಛೇರಿ, ವಿಭಾಗೀಯ ಕಛೇರಿಗಳು. ತರಬೇತಿ ಕೇಂದ್ರಗಳಿಗೆ ಸಾರ್ವತ್ರಿಕ ರಜೆ ಘೋಷಿಸಿದೆ.

ಘಟಕ, ವಿಭಾಗೀಯ ಕಾರ್ಯಾಗಾರ, ಪ್ರಾದೇಶಿಕ ಕಾರ್ಯಾಗಾರ, ಕರಾಸಾ ಮುದ್ರಣಾಲಯ ಹಾಗೂ ಕರಾಸಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಮತದಾನದ ದಿನಾಂಕದಂದು ವೇತನ ಸಹಿತ ರಜೆಯನ್ನು ನೀಡುವುದು. ಈ ಹಿನ್ನೆಲೆಯಲ್ಲಿ ಚುನಾವಣಾ ದಿನದಂದು ಅವಶ್ಯಕತೆಗೆ ಅನುಗುಣವಾಗಿ ಕನಿಷ್ಠ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಬಳಸಿಕೊಳ್ಳುವುದು.ಮುಂದುವರೆದು. ಚುನಾವಣಾ ದಿನದಂದು ಕರ್ತವ್ಯದ ಮೇಲಿರುವ ಸಿಬ್ಬಂದಿಗಳಿಗೆ ಅವರ ಅನುಕೂಲಕ್ಕನುಗುಣವಾಗಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಅಥವಾ ಕರ್ತವ್ಯದ ಅವಧಿಯ ಮಧ್ಯೆ ಮತ ಚಲಾಯಿಸಲು ಅವಕಾಶವನ್ನು ಮಾಡಿಕೊಡುವಂತೆ/ಅನುಮತಿ ನೀಡುವಂತೆ ಸೂಕ್ತಾಧಿಕಾರಿಗಳು ಆದೇಶಿಸಿರುತ್ತಾರೆ. ಅದರಂತೆ, ಕ್ರಮ ಕೈಗೊಳ್ಳುವುದು ಎಂದು ಕ.ರಾ.ರ.ಸಾ.ನಿಗಮವು ಸುತ್ತೋಲೆ ಹೊರಡಿಸಿದೆ.

ಮತದಾನದ ದಿನ ರಜೆ ಘೋಷಿಸಿದ KSRTC : ಬಸ್ ಇರುತ್ತೋ.. ಇಲ್ವೋ..?

ಚುನಾವಣಾ ದಿನದಂದು ಕರ್ತವ್ಯದ ಮೇಲಿರುವ ಸಿಬ್ಬಂದಿಗೆ ಅವರ ಅನುಕೂಲಕ್ಕನುಗುಣವಾಗಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಅಥವಾ ಕರ್ತವ್ಯದ ಅವಧಿಯ ಮಧ್ಯೆ ಮತ ಚಲಾಯಿಸಲು ಅವಕಾಶವನ್ನು ಮಾಡಿಕೊಡುವಂತೆ / ಅನುಮತಿ ನೀಡುವಂತೆ ಸೂಕ್ತಾಧಿಕಾರಿಗಳು ಆದೇಶಿಸಿರುತ್ತಾರೆ. ಅದರಂತೆ, ಕ್ರಮ ಕೈಗೊಳ್ಳಬೇಕು ಎಂದು ಕೆಎಸ್ಆರ್ಟಿಸಿ ಆದೇಶಿಸಿದೆ. ಹೀಗಾಗಿ ಮತದಾನದ ದಿನದಂದು ಕನಿಷ್ಟ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಬಸ್ಸುಗಳ ಸಂಖ್ಯೆ ಕಡಿಮೆಯಿರಲಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...