alex Certify ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪ್ರಯಾಣ ದರ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪ್ರಯಾಣ ದರ ಇಳಿಕೆ

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗ-1 ರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಕಲಬುರಗಿ-ಹೈದ್ರಾಬಾದ್ ಮಾರ್ಗದಲ್ಲಿ ಸಂಚರಿಸುವ ರಾಜಹಂಸ ಬಸ್‍ಗಳ ಪ್ರಯಾಣದರದಲ್ಲಿ ಇಳಿಕೆ ಮಾಡಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಘಟಕ-1 ರ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಹೆಚ್. ಸಂತೋಷ ಕುಮಾರ್ ತಿಳಿಸಿದ್ದಾರೆ.

ಕಲಬುರಗಿಯಿಂದ ಹೈದ್ರಾಬಾದ್‍ಗೆ ತೆರಳುವ ರಾಜಹಂಸ ಬಸ್ ಪ್ರಯಾಣ ದರ 320 ರೂ.,  ಹುಮನಾಬಾದ್‍ದಿಂದ ಹೈದ್ರಾಬಾದ್‍ಗೆ 252 ರೂ., ಮನ್ನಾಖ್ಖೇಳಿಯಿಂದ ಹೈದ್ರಾಬಾದ್‍ಗೆ 202 ರೂ., ಜಹೀರಾಬಾದ್‍ನಿಂದ ಹೈದ್ರಾಬಾದ್‍ಗೆ 165 ರೂ., ಕಲಬುರಗಿಯಿಂದ ಹುಮನಾಬಾದ್‍ಗೆ 83 ರೂ. ಕಲಬುರಗಿಯಿಂದ ಮನ್ನಾಖ್ಖೇಳಿಗೆ 134 ರೂ. ಹಾಗೂ ಕಲಬುರಗಿಯಿಂದ ಜಹೀರಾಬಾದ್‍ಗೆ 171 ರೂ.ಗಳ ದರವನ್ನು ನಿಗದಿಪಡಿಸಲಾಗಿದೆ.

ಕಲಬುರಗಿಯಿಂದ ಹೈದ್ರಾಬಾದ್‍ಗೆ ತೆರಳುವ ರಾಜಹಂಸ ಬಸ್ಸಿನ ವೇಳಾಪಟ್ಟಿ ಇಂತಿದೆ.

ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ, ಮಧ್ಯಾಹ್ನ 1 ಗಂಟೆಗೆ, ಮಧ್ಯಾಹ್ನ 3 ಗಂಟೆಗೆ, ರಾತ್ರಿ 11, ರಾತ್ರಿ 11.30 ಹಾಗೂ 11.55 ಗಂಟೆಗೆ ಹೊರಡಲಿದೆ.

 ಹೈದ್ರಾಬಾದ್‍ದಿಂದ ಕಲಬುರಗಿಗೆ ಪ್ರಯಾಣಿಸುವ (ರಾಜಹಂಸ) ಬಸ್ಸಿನ ವೇಳಾಪಟ್ಟಿ ಇಂತಿದೆ.

ಮಧ್ಯರಾತ್ರಿ 12:15ಕ್ಕೆ, ಬೆಳಿಗ್ಗೆ 9.30ಕ್ಕೆ, 10.15ಕ್ಕೆ, 11.30ಕ್ಕೆ, ರಾತ್ರಿ 11 ಕ್ಕೆ ಹಾಗೂ 11.30 ಗಂಟೆಗೆ ಸಮಯವನ್ನು ನಿಗದಿಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...