alex Certify KSRTC ಬಸ್ ನಲ್ಲಿ ಪ್ರಯಾಣಿಸ್ತೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KSRTC ಬಸ್ ನಲ್ಲಿ ಪ್ರಯಾಣಿಸ್ತೀರಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ನೀವು ಪ್ರಯಾಣಿಸುವವರಾಗಿದ್ದರೆ ನಿಮಗೆ ಈ ವಿಷಯ ತಿಳಿದಿರಲಿ. ಲಗೇಜಿನ ಕುರಿತಂತೆ ಕೆಎಸ್ಆರ್ಟಿಸಿ ಈಗ ಕೆಲವೊಂದು ಪ್ರಯಾಣಿಕ ಸ್ನೇಹಿ ತೀರ್ಮಾನಗಳನ್ನು ಕೈಗೊಂಡಿದೆ.

ಅದರಂತೆ ಇನ್ನು ಮುಂದೆ ಪ್ರಯಾಣಿಕರು ತಲಾ 30 ಕೆಜಿ ತೂಕದ ಲಗೇಜ್ ಅನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಇತರ ಎರಡು ನಿಗಮಗಳ ಪ್ರಯಾಣಿಕರಿಗೂ ಇದು ಅನ್ವಯವಾಗಲಿದೆ.

ಅಲ್ಲದೆ ನಾಯಿಯನ್ನು ಪ್ರಯಾಣಿಕರು ತಮ್ಮೊಂದಿಗೆ ಕರೆದೊಯ್ಯುವಾಗ ಅದಕ್ಕೆ ಪೂರ್ಣ ಟಿಕೆಟ್ ನೀಡಲು ಸೂಚಿಸಲಾಗಿದ್ದು, ನಾಯಿ ಮರಿ ಇದ್ದರೆ ಅದಕ್ಕೆ ಅರ್ಧ ಟಿಕೆಟ್ ದರ ಪಡೆಯಬೇಕಿದೆ. ಲಗೇಜ್ ಕುರಿತ ನಿಗಮದ ಈ ಆದೇಶದಿಂದಾಗಿ ಗ್ರಾಮೀಣ ಭಾಗದ ಜನರಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...