
ಈ ಸಿನಿಮಾದ ಪರಂ ಸುಂದರಿ ಹಾಡು ಕೂಡ ಸೋಶಿಯಲ್ ಮೀಡಿಯಾದ ಧೂಳೆಬ್ಬಿಸಿದೆ. ಈ ಸಿನಿಮಾ ಹಾಡು ಇದೀಗ ಚರ್ಚಾ ವಿಷಯವಾಗಿದ್ದು ಅಭಿಮಾನಿಯೊಬ್ಬ ಪರಂ ಸುಂದರಿ ಹಾಡು ನನ್ನ ಜೀವನವನ್ನೇ ಹಾಳು ಮಾಡಿದೆ ಎಂದು ಹೇಳಿದ್ದಾರೆ.
ಅಭಿಮಾನಿಯ ಈ ಆರೋಪಕ್ಕೆ ಕೃತಿ ಸನೂನ್ ನಗುತ್ತಲೇ ಉತ್ತರಿಸಿದ್ದು ಈ ಸಂಭಾಷಣೆಯ ಸ್ಕ್ರೀನ್ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪರಂ ಚಹ್ಯಾ ಎಂಬ ಹೆಸರಿನ ವ್ಯಕ್ತಿಯು ಟ್ವಿಟರ್ನಲ್ಲಿ ಪರಂ ಸುಂದರಿ ಹಾಡಿನ ಬಗ್ಗೆ ಬರೆದಿದ್ದಾರೆ.
ಬಾಲ್ಯದಲ್ಲಿ ಅನೇಕರು ನನ್ನ ಹೆಸರನ್ನು ಆಡಿಕೊಂಡಾಗಲೂ ನನಗೆ ಏನೂ ಅನಿಸಿರಲಿಲ್ಲ. ಆದರೆ ಯಾವಾಗ ಕೃತಿ ಸನೂನ್ರ ಪರಂ ಸುಂದರಿ ಹಾಡು ರಿಲೀಸ್ ಆಯ್ತೋ ಅಂದಿನಿಂದ ನನಗೆ ಇದೇ ಹಾಡನ್ನು ಹಾಡಿ ಸ್ನೇಹಿತರು ಕಾಲೆಳೆಯುತ್ತಿದ್ದಾರೆ. ಇದನ್ನು ಯಾಕೆ ಮಾಡಿದ್ರಿ ಕೃತಿ..? ನನ್ನ ಜೀವನವನ್ನೇಕೆ ಹಾಳು ಮಾಡಿದ್ರಿ..? ಎಂದು ಫನ್ನಿಯಾಗಿ ಬರೆದಿದ್ದಾರೆ.
ಈ ಟ್ವೀಟ್ಗೆ ಸ್ವತಃ ಕೃತಿ ಸನೋನ್ ಪ್ರತಿಕ್ರಿಯಿಸಿದ್ದ ಊಪ್ಸ್…! ಸಾರಿ ಎನ್ನುವ ಮೂಲಕ ಕ್ಷಮೆಯಾಚಿಸಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.