alex Certify ಕುಟುಂಬದವರೊಂದಿಗೆ ನದಿ ಬಳಿ ಬಂದಾಗಲೇ ದುರಂತ: ಸೋದರರಿಬ್ಬರೂ ನೀರುಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬದವರೊಂದಿಗೆ ನದಿ ಬಳಿ ಬಂದಾಗಲೇ ದುರಂತ: ಸೋದರರಿಬ್ಬರೂ ನೀರುಪಾಲು

ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕುಪ್ಪೂರು ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಸೋದರರಿಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಕುಪ್ಪೂರು ಗ್ರಾಮದ ರಜಾಕ್ ಸಾಬ್(35), ಅವರ ಸೋದರ ಮೌಲಾಸಾಬ್(32) ನೀರುಪಾಲಾದವರು ಎಂದು ಹೇಳಲಾಗಿದೆ. ಕುಟುಂಬದವರೊಂದಿಗೆ ಕೃಷ್ಣಾ ನದಿ ಸಮೀಪ ಬಂದಿದ್ದ ಅವರು ನದಿಯಲ್ಲಿ ಸ್ನಾನ ಮಾಡಲು ಇಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

ಮಾಹಿತಿ ತಿಳಿದ ದೇವದುರ್ಗ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ತಳದ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...