alex Certify ರಸ್ತೆ ಮಧ್ಯೆ ಎಳೆದಾಡಿ ಚುಂಬಿಸಿದ ಕಾಮುಕ: ಶಾಕಿಂಗ್ ವಿಡಿಯೋ ಹಂಚಿಕೊಂಡ ಯೂಟ್ಯೂಬರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯೆ ಎಳೆದಾಡಿ ಚುಂಬಿಸಿದ ಕಾಮುಕ: ಶಾಕಿಂಗ್ ವಿಡಿಯೋ ಹಂಚಿಕೊಂಡ ಯೂಟ್ಯೂಬರ್​

ಮುಂಬೈನ ಬೀದಿಯಲ್ಲಿ ತಾವು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಕುರಿತು ಕೋರಿಯನ್​ ಯುಟ್ಯೂಬರ್​ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದು, ಅದೀಗ ವೈರಲ್​ ಆಗಿದೆ. ಮುಂಬೈನ ಖಾರ್ ಪ್ರದೇಶದ ಸುತ್ತಲೂ ಲೈವ್ ಸ್ಟ್ರೀಮ್ ಮಾಡುತ್ತಿದ್ದ ವೇಳೆ ತಮಗಾಗಿರುವ ಕಹಿ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.

ಜನನಿಬಿಡ ರಸ್ತೆಯಲ್ಲಿ ಜನರ ಮಧ್ಯೆ ವ್ಯಕ್ತಿಯೊಬ್ಬ ಆಕೆಯ ಕೈಯನ್ನು ಬಲವಂತವಾಗಿ ಹಿಡಿದು ಚುಂಬಿಸಲು ಪ್ರಯತ್ನಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಯುವತಿಯನ್ನು ಕೈಯಿಂದ ಎಳೆದುಕೊಂಡು ತನ್ನ ಬೈಕ್‌ನಲ್ಲಿ ಸವಾರಿ ಮಾಡಲು ಕೇಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯೂಟ್ಯೂಬರ್​ ವಿರೋಧಿಸಿದಾಗ ಆತ ಚುಂಬಿಸುವುದನ್ನು ನೋಡಬಹುದಾಗಿದೆ.

ಆದಿತ್ಯ ಎಂಬ ಟ್ವಿಟರ್ ಬಳಕೆದಾರರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ, ಅವರ ಗಮನಕ್ಕೆ ಈ ವಿಷಯ ತಂದಿದ್ದಾರೆ. ಇದು ಅಸಹ್ಯಕರವಾಗಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಬರೆದಿದ್ದಾರೆ. ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪೊಲೀಸರು ತನಿಖೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಯುವಕರನ್ನು ಮೊಬೀನ್ ಚಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಅನ್ಸಾರಿ ಎಂದು ಗುರುತಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...