
ಬಾಲಿವುಡ್ ಚಿತ್ರಗಳ ಅನೇಕ ಹಾಡುಗಳು ದೇಶದ ಎಲ್ಲೆ ಮೀರಿದ್ದಿದೆ, ಹೆಚ್ಚಿನ ಜನರಿಂದ ಪ್ರೀತಿಸಲ್ಪಟ್ಟಿದೆ. ಹತ್ತು ಹಲವು ದೇಶಗಳಲ್ಲಿ ಜನಪ್ರಿಯವಾಗಿದ್ದಿದೆ. ಆಕರ್ಷಕವಾದ ಬೀಟ್ಗಳು ಎಂತವರನ್ನು ಸಹ ಡ್ಯಾನ್ಸ್ ಮಾಡಲು ಪ್ರೇರೇಪಿಸುತ್ತದೆ.
ಏ ಜವಾನಿ ಹೇ ದಿವಾನಿ ಚಿತ್ರದ ಜನಪ್ರಿಯ “ಗಾಘ್ರಾ…’ ಹಾಡಿಗೆ ಕೊರಿಯಾದ ವಿದ್ಯಾರ್ಥಿಗಳ ಗುಂಪೊಂದು ಸ್ಟೆಪ್ ಹಾಕುವ ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ.
ವರ್ಣರಂಜಿತ ಸಾಂಪ್ರದಾಯಿಕ ಧಿರಿಸು ತೊಟ್ಟಿದ್ದು ತಮ್ಮ ಶಾಲೆಯ ಮುಂಭಾಗದ ಫೋಡಿಯಂನಲ್ಲಿ ಹೆಜ್ಜೆ ಹಾಕಿದ್ದಾರೆ. ಲವಲವಿಕೆಯ ಆ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿರುವುದು, ಸಂಯೋಜನೆ ಗಮನ ಸೆಳೆಯುತ್ತದೆ. ನೆಟ್ಟಿಗರು ನೂರಾರು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಲನಚಿತ್ರದಲ್ಲಿ ರಣಬೀರ್ ಕಪೂರ್, ಮಾಧುರೀ ದೀಕ್ಷಿತ್ ಹೆಜ್ಜೆ ಹಾಕಿರುವ ಈ ಹಾಡು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಅದರು ತನ್ನ ವ್ಯಾಪ್ತಿಯನ್ನು ಭಾರತದಿಂದ ಹೊರಗೂ ಹರಡಿದೆ ಎಂಬುದಕ್ಕೆ ಈ ಶಾಲಾ ಮಕ್ಕಳ ನೃತ್ಯವೇ ಸಾಕ್ಷಿಯಾಗಿದೆ.