alex Certify ಕೋಲ್ಕತ್ತಾದಲ್ಲಿ ತಲೆಯೆತ್ತಿದೆ ದುಬೈನ ಪ್ರಸಿದ್ಧ ಬುರ್ಜ್​ ಕಲೀಫಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಲ್ಕತ್ತಾದಲ್ಲಿ ತಲೆಯೆತ್ತಿದೆ ದುಬೈನ ಪ್ರಸಿದ್ಧ ಬುರ್ಜ್​ ಕಲೀಫಾ…..!

ಕೋಲ್ಕತ್ತಾದ ಶ್ರೀಭೂಮಿ ಕ್ಲಬ್​ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ವಿಶೇಷ ಮಾದರಿಯ ದುರ್ಗಾ ಮಾತೆಯ ಅವತಾರಗಳನ್ನು ಸೃಷ್ಟಿಸುವ ಮೂಲಕ ಸುದ್ದಿಯಾಗುತ್ತಲೇ ಇರುತ್ತದೆ. ಈ ಬಾರಿ ಬುರ್ಜ್​ ಕಲೀಫಾ ಮಾದರಿಯ ಪೆಂಡಾಲ್​ನ್ನು ಇರಿಸಿದೆ.

ಸಪ್ತಮಿ ಪ್ರಯುಕ್ತ ಸಾಕಷ್ಟು ಸಂಖ್ಯೆಯಲ್ಲಿ ಜನರು ಈ ಪೆಂಡಾಲ್​ನ್ನು ನೋಡುವ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಲೇಕ್​ಟೌನ್​ ಏರಿಯಾಗೆ ಜಮಾಯಿಸಿದ್ದಾರೆ. ಆದರೆ ಕೋವಿಡ್​ ಕಾರಣದಿಂದಾಗಿ ಎಲ್ಲರಿಗೂ ಪೆಂಡಾಲ್​ ಕಣ್ತುಂಬಿಕೊಳ್ಳುವ ಭಾಗ್ಯ ದೊರಕಲಿಲ್ಲ. ಕ್ಲಬ್​ನ ವತಿಯಿಂದ ಲಿಸ್ಟ್​ ಮಾಡಲಾಗಿದ್ದವರನ್ನು ಮಾತ್ರ ಪೆಂಡಾಲ್​ ಒಳಕ್ಕೆ ಪ್ರವೇಶಿಸಲು ಅನುಮತಿಸಲಾಗಿತ್ತು.

ದುಬೈನಲ್ಲಿರುವ ಪ್ರಸಿದ್ಧ ಬುರ್ಜ್​ ಕಲೀಫಾವನ್ನು ಇಲ್ಲಿ ಮರುಸೃಷ್ಟಿಸಲಾಗಿದ್ದು. ಇದು ಸುಮಾರು 145 ಅಡಿ ಎತ್ತರ ಹೊಂದಿದ್ದು, 6000 ಅಕ್ರಿಲಿಕ್​ ಹಾಳೆಗಳನ್ನು ಬಳಸಿ ನಿರ್ಮಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...