
ಸಪ್ತಮಿ ಪ್ರಯುಕ್ತ ಸಾಕಷ್ಟು ಸಂಖ್ಯೆಯಲ್ಲಿ ಜನರು ಈ ಪೆಂಡಾಲ್ನ್ನು ನೋಡುವ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಲೇಕ್ಟೌನ್ ಏರಿಯಾಗೆ ಜಮಾಯಿಸಿದ್ದಾರೆ. ಆದರೆ ಕೋವಿಡ್ ಕಾರಣದಿಂದಾಗಿ ಎಲ್ಲರಿಗೂ ಪೆಂಡಾಲ್ ಕಣ್ತುಂಬಿಕೊಳ್ಳುವ ಭಾಗ್ಯ ದೊರಕಲಿಲ್ಲ. ಕ್ಲಬ್ನ ವತಿಯಿಂದ ಲಿಸ್ಟ್ ಮಾಡಲಾಗಿದ್ದವರನ್ನು ಮಾತ್ರ ಪೆಂಡಾಲ್ ಒಳಕ್ಕೆ ಪ್ರವೇಶಿಸಲು ಅನುಮತಿಸಲಾಗಿತ್ತು.
ದುಬೈನಲ್ಲಿರುವ ಪ್ರಸಿದ್ಧ ಬುರ್ಜ್ ಕಲೀಫಾವನ್ನು ಇಲ್ಲಿ ಮರುಸೃಷ್ಟಿಸಲಾಗಿದ್ದು. ಇದು ಸುಮಾರು 145 ಅಡಿ ಎತ್ತರ ಹೊಂದಿದ್ದು, 6000 ಅಕ್ರಿಲಿಕ್ ಹಾಳೆಗಳನ್ನು ಬಳಸಿ ನಿರ್ಮಿಸಲಾಗಿದೆ.