ಕೋಲ್ಕತ್ತಾ: ಶಾಲಾ ಶಿಕ್ಷಕಿ ಹಾಗೂ ಆಕೆಯ 14 ವರ್ಷದ ಮಗನನ್ನು ಕೋಲ್ಕತ್ತಾದಲ್ಲಿ ಸೋಮವಾರ ಹತ್ಯೆ ಮಾಡಲಾಗಿದೆ. ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪತಿ ಕೆಲಸದಿಂದ ಹಿಂದಿರುಗುವಾಗ ಮನೆಯ ಬಾಗಿಲು ತೆರೆದಿತ್ತು. ಪುತ್ರ, ಶಾಲಾ ಸಮವಸ್ತ್ರವನ್ನು ಕುತ್ತಿಗೆಗೆ ಕಟ್ಟಿಕೊಂಡು ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಮಹಿಳೆಯ ಶವ ನೆಲದ ಮೇಲೆ ಪತ್ತೆಯಾಗಿದೆ. ಒಂದಕ್ಕಿಂತ ಹೆಚ್ಚು ದಾಳಿಕೋರರು ಕಿಚನ್ ಚಾಪರ್ ನಿಂದ ಹತ್ಯೆಗೈದಿರುವ ಸಾಧ್ಯತೆ ಇದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಇಲ್ಲಿದೆ ಜಗತ್ತಿನ ಅತಿ ಹಿರಿಯ ಜೀವಿ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ
ಇನ್ನು ಪ್ರಕರಣದಲ್ಲಿ ಪತಿ ಹಾಗೂ ಪುತ್ರನ ಟ್ಯೂಷನ್ ಟೀಚರ್ ಅನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಸಂಜೆ 5ರ ಸುಮಾರಿಗೆ ಟ್ಯೂಷನ್ ಬಳಿ ಬಂದಿದ್ದರು. ಆದರೆ ಬಾಗಿಲು ಮುಚ್ಚಿದ್ದರಿಂದ ವಾಪಸ್ ಹೋದರೆಂದು ಹೇಳಲಾಗಿದೆ. ನೆರೆಹೊರೆಯವರು ಹೇಳುವ ಪ್ರಕಾರ, ಅವರು ಅನುಮಾನಾಸ್ಪದ ವ್ಯಕ್ತಿಗಳನ್ನು ನೋಡಿಲ್ಲ ಹಾಗೂ ಕೂಗುವ ಧ್ವನಿ ಕೇಳಿಸಿಲ್ಲ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಕೊಲೆಗಾರ ಮಹಿಳೆಗೆ ತಿಳಿದಿರಬಹುದು. ಹೀಗಾಗಿ ಆಕೆ ಬಾಗಿಲು ತೆರೆದಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.