
ಹೌದು, ಟ್ವಿಟ್ಟರ್ ನಲ್ಲಿ ಫೋಟೋ ಒಂದನ್ನು ಹಂಚಿಕೊಳ್ಳಲಾಗಿದ್ದು, ಇದು ಎಲ್ಲರ ಗಮನಸೆಳೆದಿದೆ. ಈ ಚಿತ್ರದಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು ಭಾರೀ ಮಳೆಯ ವೇಳೆ ಕೊಡೆ ಹಿಡಿದು ನಿಂತಿದ್ದರು. ಆದರೆ, ಜನರ ಗಮನ ಸೆಳೆದಿದ್ದು, ಟ್ರಾಫಿಕ್ ಪೊಲೀಸ್ ಹಿಡಿದಿದ್ದ ಕೊಡೆಯಡಿಯಲ್ಲಿ ಆಶ್ರಯ ಪಡೆದಿದ್ದ ಎರಡು ಬೀದಿ ನಾಯಿಗಳು. ಒಂದೆಡೆ ಜೋರಾಗಿ ಮಳೆ ಸುರಿಯುತ್ತಿದ್ದರೆ, ಪೊಲೀಸ್ ಕೊಡೆ ಹಿಡಿದು ಟ್ರಾಫಿಕ್ ಅನ್ನು ನಿಯಂತ್ರಿಸುತ್ತಿದ್ದರು.
ಈ ವೇಳೆ ಕೊಡೆಯಡಿಯಲ್ಲಿ ಆಶ್ರಯ ಪಡೆದ ನಾಯಿಗಳು ಪೊಲೀಸ್ ಗೆ ಕಂಪನಿ ನೀಡಿವೆ. ಪೊಲೀಸರ ಅಧಿಕೃತ ಟ್ವಿಟ್ಟರ್ ನಲ್ಲಿ ‘ದಿನದ ಕ್ಷಣ’ ಎಂದು ಶೀರ್ಷಿಕೆ ಬರೆದು ಈ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೆಟ್ಟಿಗರ ಹೃದಯಗೆದ್ದಿದೆ.