ಪ್ರಚಲಿತ ಡಿಸೈನರ್ ಬ್ರ್ಯಾಂಡ್ ಆಗಿರುವ ಸಬ್ಯಸಾಚಿ ಇತ್ತೀಚಿಗೆ ವಧುವಿನ ಕಲೆಕ್ಷನ್ಗಳನ್ನು ಪರಿಚಯಿಸುವ ಮಾಡೆಲ್ ಫೋಟೋಶೂಟ್ನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು ಸಖತ್ ಟ್ರೋಲ್ಗೆ ಒಳಗಾಗಿದೆ.
ಮಾಡೆಲ್ಗಳು ಧರಿಸಿದ ಉಡುಪುಗಳು ಉತ್ತಮವಾಗಿದ್ದರೂ ಸಹ ಮಾಡೆಲ್ಗಳು ಶೋಕದಲ್ಲಿ ಇರುವಂತೆ ಪೋಸ್ ನೀಡಿದ್ದು ಹಾಗೂ ಒಬ್ಬ ಮಾಡೆಲ್ನ ಮುಖದಲ್ಲಿಯೂ ಬಿಂದಿ ಇಲ್ಲದೇ ಇರುವುದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದೂ ವಧು ಹಣೆಯಲ್ಲಿ ಬಿಂದಿ ಇಲ್ಲದೇ ಇಷ್ಟು ದುಃಖದಲ್ಲಿ ಏಕೆ ಇರುತ್ತಾಳೆ..? ಈ ರೀತಿ ಇದ್ದರೆ ಆಕೆಯನ್ನು ವಧು ಅಂತಾ ಯಾರು ಕರೀತಾರೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗ್ತಿದೆ.
ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಸಬ್ಯಸಾಚಿಯ ಈ ವೆಡ್ಡಿಂಗ್ ಕಲೆಕ್ಷನ್ ಫೋಟೋಶೂಟ್ಗೆ ಕಮೆಂಟ್ ಮಾಡಿದ್ದಾರೆ. ಅರ್ರೆ….. ಇಲ್ಲಿ ಯಾರಾದರೂ ಸತ್ತು ಹೋದರೇ..? ಮಾಡೆಲ್ಗಳು ಇಷ್ಟು ದುಃಖದಲ್ಲಿ ಇರೋಕೆ ಕಾರಣವಾದ್ರೂ ಏನು ಅಂತಾ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಮಧುವಣಗಿತ್ತಿಯಂತೆ ತಯಾರಾಗಿ ಇವರೆಲ್ಲ ಯಾರ ಅಂತ್ಯಕ್ರಿಯೆಗೆ ಹೋಗ್ತಿದ್ದಾರೆ ಅಂತಾ ಕೇಳ್ತಿದ್ದಾರೆ. ಇನ್ನೂ ಕೆಲವರು ಹಣವಿದ್ದರೆ ಸಭ್ಯಸಾಚಿ ಬಟ್ಟೆ ಕೊಂಡುಕೊಳ್ಳಬಹುದೇ ವಿನಃ ಖುಷಿಯನ್ನ ಅಲ್ಲ ಎನ್ನುವುದನ್ನ ಈ ಫೊಟೋ ಸಾರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ .
ನಕಾರಾತ್ಮಕ ಕಮೆಂಟ್ಗಳ ಹೊರತಾಗಿಯೂ, ಅನೇಕರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿರುವ ಲುಕ್ಕಿಂಗ್ ಲೈಕ್ ಅ ವ್ಹಾವ್ ಅಂತಾ ಕಮೆಂಟ್ ಮಾಡಿದ್ದಾರೆ.