ಹಲವು ಆರೋಗ್ಯಕರ ಅಂಶಗಳನ್ನು ಒಳಗೊಂಡಿರುವ ಪಪ್ಪಾಯದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಗರ್ಭಿಣಿಯರು ಅತಿಯಾಗಿ ಸೇವಿಸಬಾರದು ಎಂಬ ಒಂದು ಕಟ್ಟುಪಾಡಿನ ಹೊರತಾಗಿ ಪಪ್ಪಾಯದಿಂದ ಹಲವು ಪ್ರಯೋಜನಗಳೇ ಇವೆ.
ಉಳಿದ ಹಣ್ಣುಗಳಿಗೆ ಹೋಲಿಸಿದರೆ ಇದು ಅಗ್ಗದಲ್ಲಿ ದೊರೆಯುತ್ತದೆ, ಇಲ್ಲವೇ ಮನೆಯಂಗಳದಲ್ಲೇ ಇದನ್ನು ಬೆಳೆಯಬಹುದು. ವಿಟಮಿನ್ ಎ ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಹೇರಳವಾಗಿ ಹೊಂದಿರುವ ಇದು ಮೂತ್ರಪಿಂಡದ ಹಲವು ಕಾಯಿಲೆಗಳಿಗೆ ಮದ್ದಾಗಬಲ್ಲದು.
ಇದನ್ನು ತಿಂದ ನಂತರ ಹೆಚ್ಚು ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಪಪ್ಪಾಯ ಹಣ್ಣಿನಲ್ಲಿ ಸಾಕಷ್ಟು ನೀರಿದೆ. ಈ ಹಣ್ಣು ತಿಂದ ಬಳಿಕ ಮತ್ತೆ ನೀರು ಕುಡಿದರೆ ಹೊಟ್ಟೆ ಉಬ್ಬರ ಉಂಟಾಗಿ ಅಜೀರ್ಣ ಸಮಸ್ಯೆಗೆ ಕಾರಣವಾಗಬಹುದು.
ನಾರಿನಂಶ ಹೆಚ್ಚಿರುವ ಈ ಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಕರುಳನ್ನು ಶುದ್ಧಗೊಳಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹ ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುವು ಮಾಡಿ ಕೊಡುತ್ತದೆ. ಈ ಎಲ್ಲಾ ಪ್ರಯೋಜನಗಳು ಸಿಗಬೇಕು ಎಂದಾದರೆ ಪಪ್ಪಾಯ ತಿಂದ ತಕ್ಷಣವೇ ನೀರು ಕುಡಿಯಲೇ ಬಾರದು.