ಕರ್ನಾಟಕದ ಹೆಮ್ಮೆಯ ನಂದಿನಿ ಹಾಲಿಗೆ ದೇಶಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ದೆಹಲಿಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ನಂದಿನಿ ಹಾಲು ಮಾರಾಟವಾಗಿದೆ.
ಮೊದಲ ದಿನವೇ 10 ಸಾವಿರ ಲೀಟರ್ ಮಾರಾಟವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇನ್ನು ಕೆಲವೇ ತಿಂಗಳಲ್ಲಿ 70 ಸಾವಿರ ಲೀಟರ್ ಹಾಲು ಮತ್ತು ಮೊಸರು ಮಾರಾಟ ಮಾಡುವ ಗುರಿ ಇದೆ.
ನಂದಿನಿ ಹಾಲಿಗೆ ಕಡಿಮೆ ಬೆಲೆ, ಉತ್ತಮ ಗುಣಮಟ್ಟ ಪ್ರಮುಖ ಆಕರ್ಷಣೆಯಾಗಿದೆ. ಈಗಾಗಲೇ ದೆಹಲಿ ಮಾರುಕಟ್ಟೆಯಲ್ಲಿ ಅಮುಲ್, ಮದರ್ ಡೈರಿ ಹಿಡಿತ ಸಾಧಿಸಿವೆ. ಇವುಗಳಿಗೆ ಪೈಪೋಟಿ ನೀಡಲು ಮುಂದಾಗಿರುವ ಕೆಎಂಎಫ್ ಗುಣಮಟ್ಟ ಮತ್ತು ಸ್ಪರ್ಧಾತ್ಮಕ ದರದೊಂದಿಗೆ ಗ್ರಾಹಕರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸಿದೆ.
ಅಮುಲ್, ಮದರ್ ಡೈರಿ, ನಂದಿನಿ ಹಾಲಿನ ಗುಣಮಟ್ಟ ಮತ್ತು ದರದಲ್ಲಿ ನಂದಿನಿ ಬ್ರಾಂಡ್ ಗ್ರಾಹಕರಿಗೆ ಆಕರ್ಷಕವಾಗಿದೆ. ಮೊದಲ ದಿನವೇ 10,000 ಲೀಟರ್ ಮಾರಾಟವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಕೆಎಂಎಫ್ ಅಧಿಕಾರಿಗಳು ದೆಹಲಿಯಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ 70,000 ಲೀಟರ್ ಹಾಲು, ಮೊಸರು ಮಾರಾಟದ ಗುರಿ ಹೊಂದಲಾಗಿದೆ.