ಬೆಂಗಳೂರು: ರಾಜ್ಯದಲ್ಲಿ ಕೆಎಂಎಫ್ ಹಾಲು ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಉತ್ತಮ ಮಳೆಯಿಂದಾಗಿ ಹೈನೋದ್ಯಮವು ಪುಟಿದೆದ್ದಿದ್ದು, ರಾಜ್ಯದಲ್ಲಿ ದಿನದ ಸರಾಸರಿ ಹಾಲು ಉತ್ಪಾದನೆ ಪ್ರಮಾಣವು ಕೋಟಿ ಲೀಟರ್‌ನ ಸನಿಹಕ್ಕೆ ಬಂದಿದೆ.
ಕೆಎಂಎಫ್‌ನ ಐದು ದಶಕಗಳ ಇತಿಹಾಸದಲ್ಲೇ ಜೂನ್ 18ರ ಮಂಗಳವಾರ ಒಂದೇ ದಿನ 98.87 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದೆ. 2022ರ ಜೂನ್ 29ರಂದು 94.18 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿದ್ದು, ಇದು ಈವರೆಗಿನ ಗರಿಷ್ಠ ದಾಖಲೆಯಾಗಿತ್ತು.
ಕೆಎಂಎಫ್‌ನ ಇತಿಹಾಸದಲ್ಲೇ ಏಪ್ರಿಲ್ 11ರಂದು 51.60 ಲಕ್ಷ ಲೀಟರ್ ನಂದಿನಿ ಸ್ಯಾಚೆಟ್ ಹಾಲು ಮತ್ತು ಏಪ್ರಿಲ್ 6 ರಂದು 13.56 ಲಕ್ಷ ಲೀಟರ್ ಮೊಸರು ಮಾರಾಟವಾಗಿದೆ.