ಇದೇ ಅಕ್ಟೋಬರ್ 27 ಹಾಗೂ 28 ರಂದು ನಂದಿನಿಯ ಮಾರಾಟ ಮಳಿಗೆ ದೆಹಲಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ದೆಹಲಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಿಂದ(ಮನ್‌ಮುಲ್) ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಮೂಲಕ ಅಮುಲ್, ಮದರ್ ಡೇರಿ ಮಾರುಕಟ್ಟೆಗೆ ಕೆಎಂಎಫ್ ಲಗ್ಗೆ ಹಾಕಲಿದೆ. ರಾಷ್ಟ್ರ ರಾಜಧಾನಿಯಲ್ಲಿಯೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಾಗಲಿವೆ. ನಂದಿನಿ ಹಾಲು ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಈಗಾಗಲೇ ವಿತರಕರ ನೇಮಿಸಲಾಗಿದೆ ಎನ್ನಲಾಗಿದೆ.