
ಬೆಂಗಳೂರು: ಹಾಳು ಇಳುವರಿ, ಸಂಗ್ರಹ ಹೆಚ್ಚಳ, ಹೈನುಗಾರಿಕೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಶೀಘ್ರವೇ ಮನೆಗೊಂದು ಹಸು ನೀಡಲಾಗುವುದು.
ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಫಲಾನುಭವಿಗಳಿಗೆ ಮನೆಗೊಂದು ಹಸು ನೀಡಲು ಚಿಂತನೆ ನಡೆದಿದೆ. ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ವರ್ಗದ ಫಲಾನುಭವಿಗಳಿಗೆ ವಾಹನ ನೀಡಲಾಗುತ್ತಿದೆ. ಹಸು ನೀಡಿದಲ್ಲಿ ಆದಾಯ ಕೂಡ ಹೆಚ್ಚುತ್ತದೆ. ಕೆಎಂಎಫ್ ಗೆ ಬರುವ ಹಾಲಿನ ಪ್ರಮಾಣ ಕೂಡ ಹೆಚ್ಚಳ ಆಗಲಿದೆ. ಹೀಗಾಗಿ ಹಸು ನೀಡುವ ಬಗ್ಗೆ ಚಿಂತನೆ ನಡೆದಿದೆ.
ಈ ಕುರಿತಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ಅವರೊಂದಿಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸಮಾಲೋಚನೆ ನಡೆಸಿದ್ದು, ಲೋಕಸಭೆ ಚುನಾವಣೆಯ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಲಾಗಿದೆ.