alex Certify ಅನುಪಮ್ ಖೇರ್‌‌ ಮದುವೆಯಾಗಲು ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಕಿರಣ್; ಹಳೆ ಕತೆ ಮೆಲುಕು ಹಾಕಿದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುಪಮ್ ಖೇರ್‌‌ ಮದುವೆಯಾಗಲು ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಕಿರಣ್; ಹಳೆ ಕತೆ ಮೆಲುಕು ಹಾಕಿದ ನಟಿ

ಕಿರಣ್ ಖೇರ್ ಮತ್ತು ಅನುಪಮ್ ಖೇರ್ ಬಾಲಿವುಡ್‌ನ ಅತ್ಯಂತ ಲವ್ಲಿ ಜೋಡಿಗಳಲ್ಲಿ ಒಂದಾಗಿದೆ. ಅವರ ಪ್ರೀತಿ ಮತ್ತು ಹೊಂದಣಿಕೆ ವಿಶೇಷವಾದದ್ದು. ಇನ್ನು, ಅವರ ಪ್ರೇಮಕಥೆಯ ಬಗ್ಗೆ‌ ಕೆಲವರಿಗೆ ತಿಳಿದಿದೆ. ಅವರ ಜೀವನಗಾಥೆ ಒಂದು ಚಿತ್ರದ ಸರಕೂ ಕೂಡ ಆಗಬಹುದು.

ಕಿರಣ್ ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ತಮ್ಮ ಪ್ರೀತಿಯ ಜೀವನದ ಬಗ್ಗೆ ಹೇಳಿಕೊಂಡಿದ್ದರು. ಅನುಪಮ್ ಜೊತೆ ತಮ್ಮ ಜೀವನ ಒಟ್ಟಿಗೆ ಕಳೆಯಲು ನಿರ್ಧರಿಸಿದಾಗ ತನಗಾಗಲೇ ಮದುವೆಯಾಗಿತ್ತು ಎಂದು ಬಹಿರಂಗಪಡಿಸಿದ್ದರು.

ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೇವೆ. ನನ್ನ ಬಗ್ಗೆ ಅವರಿಗೆ ತಿಳಿಯದ ವಿಚಾರವೇ ಇರಲಿಲ್ಲ. ಅವರ ಬಗ್ಗೆ ನನಗೆ ಎಲ್ಲವೂ ತಿಳಿದಿತ್ತು ಎ‌ಂದು ಹೇಳಿಕೊಂಡಿದ್ದರು.

ಆ ಸಮಯದಲ್ಲಿ ಕಿರಣ್ ಬಾಂಬೆ ಉದ್ಯಮಿ ಗೌತಮ್ ಬೆರಿ ಅವರನ್ನು ವಿವಾಹವಾದರೆ, ಅನುಪಮ್ ಮಧುಮಲ್ತಿ ಅವರನ್ನು ವಿವಾಹವಾಗಿದ್ದರು. ಅನುಪಮ್ ಜೊತೆಗಿನ ಸ್ನೇಹ ಮೀರಿ ಯಾವುದೇ ರೀತಿಯ ಆಕರ್ಷಣೆ ಇರಲಿಲ್ಲ ಎಂದು ಅವರು ಹೇಳಿಕೊಂಡಿದ್ದರು.

ತಾಲಿಬಾನ್ ಆಳ್ವಿಕೆಯಲ್ಲಿ ಬೀದಿಬದಿ ವ್ಯಾಪಾರಿಯಾದ ಅಫ್ಘಾನ್ ಟಿವಿ ಆ್ಯಂಕರ್

ನಾದಿರಾ ಬಬ್ಬರ್ ಅವರ ನಾಟಕಕ್ಕಾಗಿ ಕೋಲ್ಕತ್ತಾಗೆ ಹೋರಟೆವು, ಅನುಪಮ್ ತಮ್ಮ ಬೋಳಿಸಿಕೊಂಡ ತಲೆಯೊಂದಿಗೆ ಸ್ವಲ್ಪ ವಿಭಿನ್ನವಾಗಿ ಕಾಣಿಸಿಕೊಂಡರು, ಅವರು ಕೋಣೆಯಿಂದ ಹೊರಡುವಾಗ, ನನ್ನತ್ತ ಹಿಂತಿರುಗಿ ನೋಡಿದಾಗ ನಮ್ಮ ನಡುವೆ ಏನೋ ಹಾದುಹೋದಂತಾಯಿತು. ನಂತರ ಅವರು ಒಮ್ಮೆ ಬಂದು ನಿನ್ನೊಂದಿಗೆ ಮಾತನಾಡಲು ಬಯಸುತ್ತೇನೆ ಎಂದರು. ಬಳಿಕ ತನ್ನ‌ಪ್ರೀತಿ ನಿವೇದನೆ ಮಾಡಿದ್ದರು ಎಂದು ಕಿರಣ್ ಎಳೆಎಳೆಯಾಗಿ ಬಹಿರಂಗಪಡಿಸಿದ್ದರು.

ಬಳಿಕ ನಾನು ವಿಚ್ಛೇದನ ಪಡೆದುಕೊಂಡೆ ಮತ್ತು ಅನುಪಮ್‌ ರನ್ನು ಮದುವೆಯಾದೆ ಎಂದು ಹೇಳಿದ್ದರು. ಕಿರಣ್ ಮತ್ತು ಅನುಪಮ್ 1985ರಲ್ಲಿ ಮದುವೆಯಾಗಿದ್ದಾರೆ. ಈಗಲೂ ಬಾಲಿವುಡ್‌ ನ ಯಶಸ್ವಿ ಜೋಡಿಗಳಲ್ಲಿ ಇವರು ಪ್ರಮುಖರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...