80 ಅಥವಾ 90ರ ದಶಕದಲ್ಲಿ ಉದಿತ್ ನಾರಾಯಣ್ ತಮ್ಮ ಸಂಗೀತದ ಮ್ಯಾಜಿಕ್ ಮೂಲಕ ದೊಡ್ಡ ಅಭಿಮಾನಿಗಳನ್ನೇ ಸೃಷ್ಟಿಸಿಕೊಂಡಿದ್ದರು. ದೇಶಭಕ್ತಿ ಗೀತೆಗಳಿಂದ ಹಿಡಿದು ರೊಮ್ಯಾಂಟಿಕ್ ಹಾಡುಗಳವರೆಗೆ ಅವರು ಎಲ್ಲಾ ಬಗೆಯ ಹಾಡನ್ನೂ ಹಾಡಿ ಗಮನ ಸೆಳೆದಿದ್ದರು. ಅದರಲ್ಲೂ ದೇಶಭಕ್ತಿ ಗೀತೆಗಳನ್ನು ತಮ್ಮ ರೇಷ್ಮೆಯಂತಹ ಕಂಠದಿಂದ ಹಾಡಿ ದೇಶದ ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡಿದರು.
ಇದೀಗ ಅವರ ಅಭಿಮಾನಿಗಳ ಪಟ್ಟಿಗೆ ಕಾನೂನು ಸಚಿವ ಕಿರಣ್ ರಿಜಿಜು ಕೂಡ ಸೇರ್ಪಡೆಯಾಗಬಹುದು. ಉದಿತ್ ನಾರಾಯಣ್ ಅವರು ʼಐಸಾ ದೇಸ್ ಹೈ ಮೇರಾ’ ಹಾಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಅದು ನಿಸ್ಸಂಶಯವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
31 ಸೆಕೆಂಡ್ಗಳ ವಿಡಿಯೋ ಕ್ಲಿಪ್ನಲ್ಲಿ ಉದಿತ್ ನಾರಾಯಣ್, 2004ರ ಚಲನಚಿತ್ರ ವೀರ್ ಝಾರಾದ ʼಐಸಾ ದೇಸ್ ಹೈ ಮೇರಾʼ ಹಾಡಿದ್ದಾರೆ. ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದಾಗ ರೂಮಿನಲ್ಲಿದ್ದವರೆಲ್ಲರೂ ಭಕ್ತಿಪರವಶರಾಗಿ ಕೇಳುತ್ತಿದ್ದರೆ, “ಕ್ಯಾ ಬಾತ್ ಹೈ, ಉದಿತ್ ಜಿ ಆಪ್ನೆ ಕಮಾಲ್ ಕರ್ ದಿಯಾ ಉದಿತ್ ಜೀ” ಎಂದು ರಿಜಿಜು ಶ್ಲಾಘಿಸಿದರು.
ಉದಿತ್ ನಾರಾಯಣ್ ಜಿ ಅವರ ಸೌಜನ್ಯದ ಭೇಟಿಯನ್ನು ಮಾಡಿದೆ. ಒಂದು ಇಡೀ ಪೀಳಿಗೆಯು ಅವರ ರೋಮ್ಯಾಂಟಿಕ್ ಸುಮಧುರ ಹಾಡುಗಳನ್ನು ಕೇಳಿ ಬೆಳೆದಿದೆ ಎಂದು ರಿಜಿಜು ಬರೆದುಕೊಂಡಿದ್ದಾರೆ.
ನೆಟ್ಟಿಗರು ರಿಜಿಜು ಮಾತನ್ನು ಒಪ್ಪಿ ಶ್ಲಾಘಿಸಿದ್ದಾರೆ. ರಿಜಿಜು ಅವರು ಉದಿತ್ ನಾರಾಯಣ್ ಅವರೊಂದಿಗಿನ ಕೆಲವು ಚಿತ್ರಗಳನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಾಡಿದ ಮೆಗಾ ಹಿಟ್ ಹಾಡುಗಳ ಸಾಲನ್ನು ಶೀರ್ಷಿಕೆಯಲ್ಲಿ ಸೇರಿಸಿದ್ದಾರೆ.