ಲಂಡನ್: ಬ್ರಿಟನ್‌ನ ಆಳ್ವಿಕೆಯ ದೊರೆ ಕಿಂಗ್ ಚಾರ್ಲ್ಸ್ III ಅವರ ಹಸ್ತಾಕ್ಷರವುಳ್ಳ ಬಾಲ್ಮೋರಲ್ ಕ್ಯಾಸಲ್ ಪೇಂಟಿಂಗ್ £ 5,737.50 ಗೆ ಮಾರಾಟವಾಗಿದೆ.
ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದರ ಮೌಲ್ಯ, 5.35 ಲಕ್ಷ ರೂಪಾಯಿಗಳು. ಚಾರ್ಲ್ಸ್ III ಚಿತ್ರಿಸಿದ ಅರಮನೆಯ ಚಿತ್ರ ಇದಾಗಿದೆ.
ಹರಾಜನ್ನು ಬೋನ್‌ಹಾಮ್ಸ್ ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ವೆಬ್‌ಸೈಟ್‌ನ ಹಮಿಶ್ ವಿಲ್ಸನ್, ನನ್ನ ಜೀವಮಾನದಲ್ಲಿ ಇಷ್ಟು ದುಬಾರಿ ಬೆಲೆಯ ಪೇಂಟಿಂಗ್ ಮಾರಾಟವಾಗಿದ್ದನ್ನು ನೋಡಿಯೇ ಇಲ್ಲ ಎಂದಿದ್ದಾರೆ. “ಈ ಆಕರ್ಷಕ ಪೇಂಟಿಂಗ್ ರಾಜನಿಗೆ ಚಿತ್ರಕಲೆಯ ಮೇಲೆ ಇದ್ದ ಪ್ರೀತಿ ಹಾಗೂ ಸ್ಕಾಟ್‌ಲ್ಯಾಂಡ್‌ನ ಜನತೆಗೆ ಅವರ ಮೇಲಿರುವ ಆಳವಾದ ಪ್ರೇಮವನ್ನು ಸೂಚಿಸಿದೆ” ಎಂದು ಅವರು ಹೇಳಿದರು.
ಚಿತ್ರಕಲೆಯು ಅದರ ಮೂಲ ಬೆಲೆಗಿಂತ ಸುಮಾರು 10 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗಿದೆ. 2001 ರಲ್ಲಿ ಬಿಡಿಸಿರುವ ಈ ಬಾಲ್ಮೋರಲ್ ಕ್ಯಾಸಲ್ ಅರಮನೆಯ ಚಿತ್ರವು 100 ವರ್ಣಚಿತ್ರಗಳಲ್ಲಿ ಒಂದಾಗಿದ್ದು, 18 ನೇ ಸ್ಥಾನದಲ್ಲಿತ್ತು.
https://twitter.com/WindsorDynasty/status/1582759938916749313?ref_src=twsrc%5Etfw%7Ctwcamp%5Etweetembed%7Ctwterm%5E1582759938916749313%7Ctwgr%5E42413cce41377e8395544816eabef5a493cd2c03%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fking-charles-signed-painting-sold-for-5-lakh-rupees-ten-times-more-than-what-was-estimated-6228061.html