alex Certify ತಲೆ, ಮರ್ಮಾಂಗಕ್ಕೆ ಹೊಡೆದು ಟೆರೇಸ್ ಮೇಲೆಯೇ ವ್ಯಕ್ತಿ ಕೊಲೆ: ಪತ್ನಿ, ಗೆಳೆಯನ ಬಗ್ಗೆಯೇ ಅನುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ, ಮರ್ಮಾಂಗಕ್ಕೆ ಹೊಡೆದು ಟೆರೇಸ್ ಮೇಲೆಯೇ ವ್ಯಕ್ತಿ ಕೊಲೆ: ಪತ್ನಿ, ಗೆಳೆಯನ ಬಗ್ಗೆಯೇ ಅನುಮಾನ

ಬೆಂಗಳೂರು: ಮನೆಯ ಟೆರೇಸ್ ಮೇಲೆಯೇ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಯಲಹಂಕದ ಕೊಂಡಪ್ಪ ಲೇಔಟ್ ನಲ್ಲಿ ನಡೆದಿದೆ.

ಚಂದ್ರಶೇಖರ್ ಮೃತಪಟ್ಟ ವ್ಯಕ್ತಿ. ಮನೆಯ ಟೆರಸ್ ಮೇಲೆಯೇ ತಲೆ ಹಾಗೂ ಮರ್ಮಾಂಗಕ್ಕೆ ಹೊಡೆದು ಚಂದ್ರಶೇಖರ್ ಅವರನ್ನು ಕೊಲೆ ಮಾಡಲಾಗಿದೆ. ಯಲಹಂಕ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆಂಧ್ರಪ್ರದೇಶ ಮೂಲದ ಚಂದ್ರಶೇಖರ್ 8 ವರ್ಷಗಳಿಂದ ಕೊಂಡಪ್ಪ ಲೇಔಟ್ ನಲ್ಲಿ ವಾಸವಾಗಿದ್ದಾರೆ. ಬಟ್ಟೆ ನೇಯುವ ಕೆಲಸ ಮಾಡಿಕೊಂಡಿದ್ದ ಅವರನ್ನು ನಿನ್ನೆ ರಾತ್ರಿ ಮನೆ ಮೇಲೆಯೇ ಕೊಲೆ ಮಾಡಲಾಗಿದೆ. ಮೃತನ ಪತ್ನಿ ಹಾಗೂ ಆಕೆಯ ಗೆಳೆಯನ ಮೇಲೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...