
ಈ ಚಿತ್ರ ಕನ್ನಡ ಅವತರಣಿಕೆಯಲ್ಲೂ ಬಿಡುಗಡೆಯಾಗಿದ್ದು, ಇದನ್ನು ಸುದೀಪ್ ಅವರ ಫ್ಯಾಂಟಮ್ ಫಿಲಂಸ್ ಸಂಸ್ಥೆ ಮೂಲಕ ನಿರ್ಮಾಪಕ ಜಾಕ್ ಮಂಜು ವಿತರಣೆ ಮಾಡಿದ್ದರು. ಇದರ ಮಧ್ಯೆ ಕಿಚ್ಚ ಸುದೀಪ್ ಅವರಿಗೆ ಕಪಿಲ್ ದೇವ್ ಅವರಿಂದ ಅಪರೂಪದ ಉಡುಗೊರೆಯೊಂದು ಸಿಕ್ಕಿದೆ.
ಕಪಿಲ್ ದೇವ್ ಅವರು ವಿಶ್ವಕಪ್ ಟೂರ್ನಿಯ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಜೇಯ 175 ರನ್ ಗಳಿಸಿದ್ದು, ಅಂದು ತಾವು ಆಡಿದ್ದ ‘ಮಂಗೂಸ್’ ಬ್ಯಾಟನ್ನು ಕಿಚ್ಚ ಸುದೀಪ್ ಅವರಿಗೆ ಉಡುಗೊರೆಯಾಗಿ ಕಪಿಲ್ ದೇವ್ ನೀಡಿದ್ದಾರೆ. ಸುದೀಪ್ ಈ ಕುರಿತು ಟ್ವೀಟ್ ಮಾಡಿ ಕಪಿಲ್ ದೇವ್ ಗೆ ಧನ್ಯವಾದ ಸಲ್ಲಿಸಿದ್ದಾರೆ.