ಸೆಲೆಬ್ರಿಟಿಗಳ ಫೋಟೋ ತೆಗೆದುಕೊಳ್ಳುವ ಸಲುವಾಗಿ ಪಾಪರಾಜಿಗಳು ಮುಗಿ ಬೀಳುತ್ತಾರೆ. ಇದು ಬಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚಾಗಿದ್ದು, ಒಂದು ಫೋಟೋ ಸಲುವಾಗಿ ವಿಮಾನ ನಿಲ್ದಾಣ, ಅವರುಗಳ ಮನೆ ಮುಂದೆ ದಿನಗಟ್ಟಲೆ ಕಾದು ಕುಳಿತಿರುತ್ತಾರೆ.
ಹೀಗೆ ಫೋಟೋ ತೆಗೆದುಕೊಳ್ಳುವ ಸಂದರ್ಭದಲ್ಲಿ ಕೆಲವೊಮ್ಮೆ ಅಚಾತುರ್ಯದ ಘಟನೆಗಳು ನಡೆದಿದ್ದು, ಈ ರೀತಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಫೋಟೋ ತೆಗೆದುಕೊಳ್ಳಲು ಹೋದ ವೇಳೆ ಪಾಪರಾಜಿಯೊಬ್ಬ ಹಿರಿಯ ನಾಗರಿಕರನ್ನು ಪಕ್ಕಕ್ಕೆ ತಳ್ಳಿದ್ದಾನೆ.
ಇದು ನಟಿಗೆ ಕೋಪ ತರಿಸಿದ್ದು, ಈ ರೀತಿ ವರ್ತಿಸಿದ ಪಾಪರಾಜಿಗೆ ಕಿಯಾರಾ ಅಡ್ವಾಣಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಏನು ಮಾಡುತ್ತಿದ್ದೀರಿ ಎಂಬುದರ ಅರಿವಿದೆಯಾ ಎಂದು ಪ್ರಶ್ನಿಸಿದ ನಟಿ, ಇನ್ನೊಮ್ಮೆ ಇದನ್ನು ಮರುಕಳಿಸಬೇಡಿ ಎಂದು ತಿಳಿ ಹೇಳಿದ್ದಾರೆ.