alex Certify ವಿಶ್ವಾದ್ಯಂತ ʼಕೆಜಿಎಫ್ʼ​ ಮೇನಿಯಾ: ಜನಪ್ರಿಯ ಫುಟ್ಬಾಲ್​ ತಂಡದಿಂದಲೂ ಸಿನಿಮಾಗೆ ಶ್ಲಾಘನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವಾದ್ಯಂತ ʼಕೆಜಿಎಫ್ʼ​ ಮೇನಿಯಾ: ಜನಪ್ರಿಯ ಫುಟ್ಬಾಲ್​ ತಂಡದಿಂದಲೂ ಸಿನಿಮಾಗೆ ಶ್ಲಾಘನೆ

KGF Mania goes worldwide as a popular football team hails the film-Entertainment  News , Firstpost

ಸ್ಯಾಂಡಲ್​ವುಡ್​ನ ʼಕೆಜಿಎಫ್​ ಚಾಪ್ಟರ್​ 2ʼ ಪ್ರಸ್ತುತ ವಿಶ್ವಾದ್ಯಂತ ಭರ್ಜರಿ ಸದ್ದು ಮಾಡ್ತಿದೆ. ಬಾಕ್ಸಾಫೀಸಿನಲ್ಲಿ ಈ ಸಿನಿಮಾ ಕೋಟಿ ಕೋಟಿ ಹಣವನ್ನು ಬಾಚುತ್ತಿದೆ. ಕೆಜಿಎಫ್​ ಫ್ರಾಂಚೈಸಿಗೆ ಪ್ರತಿ ದಿನವೂ ಹೊಸ ದಿನ ಎಂಬಂತಾಗಿದೆ. ಕೆಜಿಎಫ್​ನ ಈ ಯಶಸ್ಸು ಜಾಗತಿಕ ಫುಟ್​ಬಾಲ್​ ತಂಡವನ್ನು ರೋಮಾಂಚನಗೊಳಿಸಿದೆ.

@Mancity ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮೂವರು ಅತ್ಯುತ್ತಮ ಕೆಜಿಎಫ್​ ಆಟಗಾರರ ಫೋಟೋಗಳನ್ನು ಹಂಚಿಕೊಂಡಿದೆ. ಕೆವಿನ್​, ಗುಂಡೋ ಹಾಗೂ ಫೋಡೆನ್​ ಕೆಜಿಎಫ್​ ಶೀರ್ಷಿಕೆಯ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಉತ್ತರ ಭಾರತದಲ್ಲಿ ಕೆಜಿಎಫ್​ 2 ವಿತರಕ ಜವಾಬ್ದಾರಿಯನ್ನು ಹೊತ್ತಿರುವ ಎಕ್ಸೆಲ್​ ಪ್ರೊಡಕ್ಷನ್​ ಮಾಲೀಕ ಫರ್ಹಾನ್ ಅಖ್ತರ್​, ನಿಮ್ಮ ತಂಡ ಹಾಗೂ ಸಿನಿಮಾವು ಒಬ್ಬರನೊಬ್ಬರು ಹುಡುಕಿದಾಗ ಎಂದು ಇನ್​ಸ್ಟಾಗ್ರಾಂನಲ್ಲಿ ಈ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಪ್ರಶಾಂತ್​ ನೀಲ್​ ನಿರ್ದೇಶನದ, ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ 2 ಸಿನಿಮಾವು ಇದೇ ತಿಂಗಳ 14ರಂದು ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್​ ಆಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.

ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್​​ರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಮತ್ತು ಎಎ ಫಿಲ್ಮ್ಸ್ ಈ ಚಿತ್ರವನ್ನು ಉತ್ತರ-ಭಾರತದ ಮಾರುಕಟ್ಟೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ದಿಲ್ ಚಾಹ್ತಾ ಹೈ, ಜಿಂದಗಿ ನಾ ಮಿಲೇಗಿ ದೊಬಾರಾ, ದಿಲ್ ಧಡಕ್ನೆ ದೋ, ಮತ್ತು ಗಲ್ಲಿ ಬಾಯ್ ಮುಂತಾದ ಸೂಪರ್ ಹಿಟ್‌ಗಳನ್ನು ಎಕ್ಸೆಲ್ ನೀಡಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...