ಸ್ಯಾಂಡಲ್ವುಡ್ನ ʼಕೆಜಿಎಫ್ ಚಾಪ್ಟರ್ 2ʼ ಪ್ರಸ್ತುತ ವಿಶ್ವಾದ್ಯಂತ ಭರ್ಜರಿ ಸದ್ದು ಮಾಡ್ತಿದೆ. ಬಾಕ್ಸಾಫೀಸಿನಲ್ಲಿ ಈ ಸಿನಿಮಾ ಕೋಟಿ ಕೋಟಿ ಹಣವನ್ನು ಬಾಚುತ್ತಿದೆ. ಕೆಜಿಎಫ್ ಫ್ರಾಂಚೈಸಿಗೆ ಪ್ರತಿ ದಿನವೂ ಹೊಸ ದಿನ ಎಂಬಂತಾಗಿದೆ. ಕೆಜಿಎಫ್ನ ಈ ಯಶಸ್ಸು ಜಾಗತಿಕ ಫುಟ್ಬಾಲ್ ತಂಡವನ್ನು ರೋಮಾಂಚನಗೊಳಿಸಿದೆ.
@Mancity ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮೂವರು ಅತ್ಯುತ್ತಮ ಕೆಜಿಎಫ್ ಆಟಗಾರರ ಫೋಟೋಗಳನ್ನು ಹಂಚಿಕೊಂಡಿದೆ. ಕೆವಿನ್, ಗುಂಡೋ ಹಾಗೂ ಫೋಡೆನ್ ಕೆಜಿಎಫ್ ಶೀರ್ಷಿಕೆಯ ಪೋಸ್ಟರ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಉತ್ತರ ಭಾರತದಲ್ಲಿ ಕೆಜಿಎಫ್ 2 ವಿತರಕ ಜವಾಬ್ದಾರಿಯನ್ನು ಹೊತ್ತಿರುವ ಎಕ್ಸೆಲ್ ಪ್ರೊಡಕ್ಷನ್ ಮಾಲೀಕ ಫರ್ಹಾನ್ ಅಖ್ತರ್, ನಿಮ್ಮ ತಂಡ ಹಾಗೂ ಸಿನಿಮಾವು ಒಬ್ಬರನೊಬ್ಬರು ಹುಡುಕಿದಾಗ ಎಂದು ಇನ್ಸ್ಟಾಗ್ರಾಂನಲ್ಲಿ ಈ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾವು ಇದೇ ತಿಂಗಳ 14ರಂದು ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.
ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ರ ಎಕ್ಸೆಲ್ ಎಂಟರ್ಟೈನ್ಮೆಂಟ್ ಮತ್ತು ಎಎ ಫಿಲ್ಮ್ಸ್ ಈ ಚಿತ್ರವನ್ನು ಉತ್ತರ-ಭಾರತದ ಮಾರುಕಟ್ಟೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ದಿಲ್ ಚಾಹ್ತಾ ಹೈ, ಜಿಂದಗಿ ನಾ ಮಿಲೇಗಿ ದೊಬಾರಾ, ದಿಲ್ ಧಡಕ್ನೆ ದೋ, ಮತ್ತು ಗಲ್ಲಿ ಬಾಯ್ ಮುಂತಾದ ಸೂಪರ್ ಹಿಟ್ಗಳನ್ನು ಎಕ್ಸೆಲ್ ನೀಡಿದೆ.