alex Certify KGF ಚಾಪ್ಟರ್ 2: ಬುಕಿಂಗ್ ಆರಂಭವಾದ ಮೊದಲ ದಿನವೇ ಮುಗಿಬಿದ್ದು ಟಿಕೆಟ್ ಖರೀದಿಸಿದ ಪ್ರೇಕ್ಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KGF ಚಾಪ್ಟರ್ 2: ಬುಕಿಂಗ್ ಆರಂಭವಾದ ಮೊದಲ ದಿನವೇ ಮುಗಿಬಿದ್ದು ಟಿಕೆಟ್ ಖರೀದಿಸಿದ ಪ್ರೇಕ್ಷಕರು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದರ ಮಧ್ಯೆ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ದೇಶದಾದ್ಯಂತ ಪ್ರೇಕ್ಷಕರು ಮುಗಿಬಿದ್ದು ಖರೀದಿಸಿದ್ದಾರೆ. ಕುತೂಹಲಕರ ಸಂಗತಿಯೆಂದರೆ ರಾಜಮೌಳಿ ನಿರ್ದೇಶನದ RRR ಚಿತ್ರಕ್ಕೆ ಆರಂಭದಲ್ಲಿಯೇ ಸಿಕ್ಕಿದ ಅದ್ಭುತ ಪ್ರತಿಕ್ರಿಯೆ ಕೆಜಿಎಫ್2 ಚಿತ್ರಕ್ಕೂ ಸಹ ಸಿಗುತ್ತಿದೆ.

ಈ ಹಿನ್ನಲೆಯಲ್ಲಿ ಕೆಜಿಎಫ್ ಚಾಪ್ಟರ್ 2 ರಾಜಮೌಳಿ ನಿರ್ದೇಶನದ RRR ದಾಖಲೆ ಮುರಿಯಲಿದೆಯಾ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ ಎಂಟು ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಾಣಲಿದ್ದು, ಭಾರತದಲ್ಲಿಯೇ ಆರು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಮುಂಗಡ ಬುಕ್ಕಿಂಗ್ ಆರಂಭವಾಗಿರುವ ಟಿಕೆಟ್ ದರ ಅತ್ಯಧಿಕವಾಗಿದ್ದರೂ ಸಹ ಅದನ್ನು ಲೆಕ್ಕಿಸದೆ ಅಭಿಮಾನಿಗಳು ಮುಗಿಬಿದ್ದು ಖರೀದಿ ಮಾಡಿದ್ದಾರೆ. ವಿಜಯ ಕಿರಂಗದೂರು ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ನಲ್ಲಿ ಬಹುದೊಡ್ಡ ತಾರಾಗಣವಿದೆ. ಯಶ್, ಸಂಜಯ್ ದತ್, ರವಿನಾ ಟಂಡನ್, ಪ್ರಕಾಶ್ ರಾಜ್, ಮಾಳವಿಕಾ ಮೊದಲಾದ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...