ಜನನಿಬಿಡ ರಸ್ತೆಯ ಬದಿಯಲ್ಲಿ ಕಾರಿನೊಳಗೆ ಕೂತು ಆಹಾರ ಸೇವಿಸುತ್ತಿದ್ದ 44 ವರ್ಷದ ಮಹಿಳೆ ಹಾಗೂ 23 ವರ್ಷದ ಪುತ್ರನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ವರದಿಯಾಗಿದೆ. ಆಗಸ್ಟ್ 30ರಂದು ಈ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 1ರಾತ್ರಿ ಪೊಲೀಸರು ಆರೋಪಿ ಆಶಿಶ್ ಎಂಬಾತನನ್ನು ಬಂಧಿಸಿದ್ದಾರೆ.
ತಾಯಿ ಹಾಗೂ ಮಗ ಪ್ರಕರಣ ಸಂಬಂಧ ಪರವೂರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಸ್ವೀಕರಿಸಿದ ಬಳಿಕ ತಮಿಳುನಾಡಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪರವೂರ್ ಪೊಲೀಸ್ ಠಾಣೆಯ ಎಸ್ಹೆಚ್ಓ ಮಾಹಿತಿ ನೀಡಿದ್ದಾರೆ.
ಬೆಲೆ ಏರಿಕೆ ನಾಡಿನ ಜನತೆಗೆ ಬಿಜೆಪಿ ಸರ್ಕಾರದ ಕೊಡುಗೆ; ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯ
ದೂರಿನ ಪ್ರಕಾರ ಆರೋಪಿಯು ಮೊದಲು ಕಾರಿನೊಳಗಿದ್ದ ಮಹಿಳೆಗೆ ಅಶ್ಲೀಲ ಪದ ಬಳಕೆ ಮಾಡಿದ್ದಾನೆ. ಇದಕ್ಕೆ ಪುತ್ರ ಅಡ್ಡಿಯೊಡ್ಡುತ್ತಿದ್ದಂತೆಯೇ ಆಶಿಷ್ ಕಾರಿನ ಮೇಲೆ ದಾಳಿ ನಡೆಸಿದ್ದಾನೆ. ಪುತ್ರ ಕಾರಿನಿಂದ ಇಳಿದು ಹೊರಗೆ ಬರುತ್ತಿದ್ದಂತೆಯೇ ಆತನ ಮೇಲೂ ಆಶಿಷ್ ಹಲ್ಲೆ ಮಾಡಿದ್ದಾನೆ. ಇದನ್ನು ತಪ್ಪಿಸಲು ಮಹಿಳೆ ಮುಂದಾದಾಗ ಅವರಿಗೂ ಹಲ್ಲೆ ಮಾಡಿದ್ದಾನೆ. ಈ ದಾಳಿಯಿಂದ ತಾಯಿ – ಮಗ ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.