
ಪೆಟ್ರೋಲ್ ಬಂಕ್ ನ ನೌಕರರೊಬ್ಬರ ಮಗಳು ಐಐಟಿ ಗೆ ಪ್ರವೇಶಾವಕಾಶ ಪಡೆದಿದ್ದಾರೆ. ಈ ಮೂಲಕ ಸಾಧನೆ ಯಾರ ಸ್ವತ್ತಲ್ಲ ಎಂದು ನಿರೂಪಿಸಿದ್ದಾರೆ.
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಯ್ಯನೂರು ನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ರಾಜಗೋಪಾಲ್ ಅವರ ಪುತ್ರಿ ಆರ್ಯಾ ರಾಜಗೋಪಾಲ್ ಐಐಟಿಗೆ ಪ್ರವೇಶ ಪಡೆದವರು.
ಬಿಟೆಕ್ ಪದವಿ ಈಗಾಗಲೇ ಪಡೆದಿರುವ ಕುಮಾರಿ ಆರ್ಯ ಈಗ ಕಾನ್ಪುರದ ಐಐಟಿ ಯಲ್ಲಿ ಎಂಟೆಕ್ ಗೆ ಪ್ರವೇಶಾವಕಾಶ ಪಡೆದಿದ್ದಾರೆ. ಅವರಿಗೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಈ ಕುರಿತಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ಆರ್ಯಾ ಸಾಧನೆಗೆ ಅಪಾರ ಜನ ಅಭಿನಂದಿಸಿದ್ದಾರೆ.
https://www.facebook.com/100000520624203/posts/5367693959924572/