alex Certify ಸಾಲ ಹಿಂದಿರುಗಿಸಲು ಕೆಲಸಕ್ಕೆ ಸೇರಿದ ಮಹಿಳೆ; ಮನಸೋಇಚ್ಛೆ ಥಳಿಸಿ ವಿಡಿಯೋ ಹರಿಬಿಟ್ಟ ರಾಕ್ಷಸ ಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ಹಿಂದಿರುಗಿಸಲು ಕೆಲಸಕ್ಕೆ ಸೇರಿದ ಮಹಿಳೆ; ಮನಸೋಇಚ್ಛೆ ಥಳಿಸಿ ವಿಡಿಯೋ ಹರಿಬಿಟ್ಟ ರಾಕ್ಷಸ ಪತಿ….!

ತಿರುವನಂತಪುರ: ಕೇರಳದಲ್ಲಿ ಭಯಾನಕ ಕೌಟುಂಬಿಕ ದೌರ್ಜನ್ಯದ ಪ್ರಕರಣವೊಂದು ನಡೆದಿದೆ. ರಾಕ್ಷಸ ಪತಿ ತನ್ನ ಪತ್ನಿಯ ಮೇಲೆ ದೌರ್ಜನ್ಯ ನಡೆಸಿದ್ದೂ ಅಲ್ಲದೇ ಅದರ ವಿಡಿಯೋ ಮಾಡಿ ತನ್ನ ಸ್ನೇಹಿತರೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾನೆ !

27 ವರ್ಷದ ದಿಲೀಪ್​ ಎಂಬಾತ ಈ ಕೃತ್ಯ ಎಸಗಿದ್ದಾನೆ. ತನ್ನ ಹೆಂಡತಿಯನ್ನು ಥಳಿಸಿ, ಹಲ್ಲೆಯನ್ನು ಚಿತ್ರೀಕರಿಸಿ ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾನೆ.

ಈತ ದೌರ್ಜನ್ಯ ನಡೆಸಲು ಕಾರಣ, ಆತನ ಪತ್ನಿ ಅವನ ಇಚ್ಛೆಗೆ ವಿರುದ್ಧವಾಗಿ ಕೆಲಸಕ್ಕೆ ಹೋದಳು ಎನ್ನುವ ಕಾರಣಕ್ಕೆ! ಸಾಲವನ್ನು ಪಾವತಿಸಲು ನೌಕರಿಗೆ ಹೋಗಿದ್ದನ್ನು ಸಹಿಸದ ಪತಿ ದಿಲೀಪ್​ ಈ ರೀತಿ ಮಾಡಿದ್ದಾನೆ.

ಈ ವಿಡಿಯೋದಲ್ಲಿ ಮಹಿಳೆಯ ಮೂಗಿಗೆ ತೀವ್ರವಾದ ಏಟು ಆಗಿರುವುದನ್ನು ನೋಡಬಹುದು. ಇಷ್ಟಾದರೂ ಕೂಡ ಪತಿ, ಆಕೆಯನ್ನು ಥಳಿಸಿ ಬಾಯಿಯನ್ನು ಜಜ್ಜಿದ್ದಾನೆ, ಮಾತ್ರವಲ್ಲದೇ ಆಕೆಯ ಮುಖದ ಮೇಲೆ ರಕ್ತ ಬರಲು ನಾನೇ ಕಾರಣ ಎಂದು ವಿಡಿಯೋದಲ್ಲಿ ಘೋಷಿಸಿಕೊಂಡಿದ್ದಾನೆ. ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...