ತಿರುವನಂತಪುರ: ಕೇರಳದಲ್ಲಿ ಭಯಾನಕ ಕೌಟುಂಬಿಕ ದೌರ್ಜನ್ಯದ ಪ್ರಕರಣವೊಂದು ನಡೆದಿದೆ. ರಾಕ್ಷಸ ಪತಿ ತನ್ನ ಪತ್ನಿಯ ಮೇಲೆ ದೌರ್ಜನ್ಯ ನಡೆಸಿದ್ದೂ ಅಲ್ಲದೇ ಅದರ ವಿಡಿಯೋ ಮಾಡಿ ತನ್ನ ಸ್ನೇಹಿತರೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾನೆ !
27 ವರ್ಷದ ದಿಲೀಪ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ತನ್ನ ಹೆಂಡತಿಯನ್ನು ಥಳಿಸಿ, ಹಲ್ಲೆಯನ್ನು ಚಿತ್ರೀಕರಿಸಿ ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾನೆ.
ಈತ ದೌರ್ಜನ್ಯ ನಡೆಸಲು ಕಾರಣ, ಆತನ ಪತ್ನಿ ಅವನ ಇಚ್ಛೆಗೆ ವಿರುದ್ಧವಾಗಿ ಕೆಲಸಕ್ಕೆ ಹೋದಳು ಎನ್ನುವ ಕಾರಣಕ್ಕೆ! ಸಾಲವನ್ನು ಪಾವತಿಸಲು ನೌಕರಿಗೆ ಹೋಗಿದ್ದನ್ನು ಸಹಿಸದ ಪತಿ ದಿಲೀಪ್ ಈ ರೀತಿ ಮಾಡಿದ್ದಾನೆ.
ಈ ವಿಡಿಯೋದಲ್ಲಿ ಮಹಿಳೆಯ ಮೂಗಿಗೆ ತೀವ್ರವಾದ ಏಟು ಆಗಿರುವುದನ್ನು ನೋಡಬಹುದು. ಇಷ್ಟಾದರೂ ಕೂಡ ಪತಿ, ಆಕೆಯನ್ನು ಥಳಿಸಿ ಬಾಯಿಯನ್ನು ಜಜ್ಜಿದ್ದಾನೆ, ಮಾತ್ರವಲ್ಲದೇ ಆಕೆಯ ಮುಖದ ಮೇಲೆ ರಕ್ತ ಬರಲು ನಾನೇ ಕಾರಣ ಎಂದು ವಿಡಿಯೋದಲ್ಲಿ ಘೋಷಿಸಿಕೊಂಡಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.