alex Certify BIG NEWS: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಯಾಣಿಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಮಾನದಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಯಾಣಿಕ ಅರೆಸ್ಟ್

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಏರ್ ಏಷ್ಯಾ ವಿಮಾನವನ್ನು ಡಿಬೋರ್ಡಿಂಗ್ ಮಾಡುವಾಗ ಪ್ರಯಾಣಿಕರೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 21 ವರ್ಷದ ಗಗನಸಖಿ ಆರೋಪಿಸಿದ್ದಾರೆ. ‌

ಮೇ 22ರ ಸೋಮವಾರದಂದು ಈ ಘಟನೆ ನಡೆದಿದೆ. ಆಕೆಗೆ ಕಿರುಕುಳ ನೀಡಿದ ಪ್ರಯಾಣಿಕನನ್ನು ಕೇರಳದ ಪಾಲಕ್ಕಾಡ್ ನಿವಾಸಿ ಸಿಜಿನ್ ಎಂದು ಗುರುತಿಸಲಾಗಿದ್ದು, ವಿಮಾನ ಲ್ಯಾಂಡ್ ಆದ ಕೆಲವೇ ಕ್ಷಣಗಳಲ್ಲಿ ಬಂಧಿಸಲಾಗಿದೆ.

ಕೊಚ್ಚಿಯಿಂದ ಬೆಂಗಳೂರಿನ ಮೂಲಕ ಭೋಪಾಲ್‌ಗೆ ತೆರಳುತ್ತಿದ್ದ ಏರ್‌ಏಷ್ಯಾ ವಿಮಾನದ ಸಿಬ್ಬಂದಿಯಲ್ಲಿ ಗಗನಸಖಿ ಇದ್ದರು.

ಪ್ರಯಾಣಿಕ ಸಿಜಿನ್ ಗೋವಾಗೆ ಹೋಗಲು ವಿಮಾನವನ್ನು ಬದಲಾಯಿಸಬೇಕೇ ಎಂದು ಫ್ಲೈಟ್ ಅಟೆಂಡೆಂಟ್‌ಗೆ ಕೇಳಿದ್ದಾರೆ. ವಿಮಾನವು ಭೋಪಾಲ್ ಕಡೆಗೆ ಹೋಗುತ್ತಿದೆ, ಗೋವಾಗೆ ಹೋಗಬೇಕಾದರೆ ಕೆಳಗಿಳಿದು ಬೇರೆ ವಿಮಾನವನ್ನು ಹತ್ತಬೇಕು ಎಂದು ಗಗನಸಖಿ ಪ್ರತಿಕ್ರಿಯಿಸಿದ್ದಾರೆ.

ಆದರೆ ಈ ವೇಳೆ ಸಿಜಿನ್ ಗಗನಸಖಿ ಬಳಿಗೆ ಬಂದು ಅನುಚಿತವಾಗಿ ಸ್ಪರ್ಶಿಸಿದ ಆರೋಪ ಮಾಡಲಾಗಿದೆ. ವಿಮಾನ ಲ್ಯಾಂಡ್ ಆದ ನಂತರ ಫ್ಲೈಟ್ ಅಟೆಂಡೆಂಟ್ ಏರ್‌ಪೋರ್ಟ್‌ನಲ್ಲಿರುವ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿ ಸಿಜಿನ್‌ನನ್ನು ಕೆಐಎ ಪೊಲೀಸರಿಗೆ ಒಪ್ಪಿಸಲಾಯಿತು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...