ಕೇರಳದ ಇಡುಕ್ಕಿಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಯುವ ಕಾಂಗ್ರೆಸ್ ಸ್ಥಳೀಯ ನಾಯಕನೊಬ್ಬನಿಂದ ಕೊಲೆಯಾದ ಎಸ್ಎಫ್ಐ ಕಾರ್ಯಕರ್ತ ಧೀರಜ್ ರಾಜೇಂದ್ರನ್ ಸ್ಮಾರಕ ನಿರ್ಮಾಣ ಮಾಡಲು ಸಿಪಿಐ(ಎಂ) ಪ್ಲಾನ್ ಒಂದನ್ನು ಸಿದ್ಧಪಡಿಸಿದೆ.
ಯುವ ಕಾಂಗ್ರೆಸ್ ನಾಯಕ ನಿಖಲಿ ಪಾಯ್ಲಿಯಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಅಂಗಳದಲ್ಲಿ ಸೋಮವಾರ ಕೊಲೆಯಾದ ಧೀರಜ್ಗೆ ಕಣ್ಣೂರು ಜಿಲ್ಲೆಯಲ್ಲಿರುವ ಆತನ ಮನೆಯ ಬಳಿ ಸ್ಮಾರಕ ಕಟ್ಟಲು ಸಿಪಿಐ(ಎಂ) ಚಿಂತನೆ ನಡೆಸಿದೆ. ಇದಕ್ಕಾಗಿ ಧೀರಜ್ನ ಮನೆಯ ಪಕ್ಕದ ಎಂಟು ಗುಂಟೆ ಜಮೀನನ್ನು ಸಹ ಸಿಪಿಐ(ಎಂ) ಖರೀದಿಸಿದೆ.
ಮೈಕೆಲ್ ಜಾಕ್ಸನ್ ನೆನಪಿಸಿದ ಯುವಕನ ಹಾಡಿಗೆ ನೆಟ್ಟಿಗರು ಫಿದಾ…..!
ಕ್ಯಾಂಪಸ್ ಚುನಾವಣೆ ಸಂಬಂಧ ವಿದ್ಯಾರ್ಥಿಗಳ ಬಣಗಳ ನಡುವೆ ಕೆಲ ದಿನಗಳಿಂದ ಹಗೆಯ ವಾತಾವರಣವಿದ್ದು, ಅದೀಗ ಧೀರಜ್ ಕೊಲೆಗೆ ತಿರುಗಿದೆ.
ಸಿಪಿಐ(ಎಂ) ಭದ್ರಕೋಟೆಯಾಗಿರುವ ಕಣ್ಣೂರಿನಲ್ಲಿ ಇದೇ ರೀತಿ ರಾಜಕೀಯ ಹಿಂಸಾಚಾರಕ್ಕೆ ಬಲಿಯಾದ ಅನೇಕ ಮಂದಿಯ ಸ್ಮಾರಕಗಳನ್ನು ಪಕ್ಷದ ಮಂದಿ ಕಟ್ಟಿದ್ದಾರೆ.