alex Certify ಹಲಸಿನ ಹಣ್ಣು ತಲೆ ಮೇಲೆ ಬಿದ್ದು ಆಸ್ಪತ್ರೆ ಸೇರಿದ ಆಟೋ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲಸಿನ ಹಣ್ಣು ತಲೆ ಮೇಲೆ ಬಿದ್ದು ಆಸ್ಪತ್ರೆ ಸೇರಿದ ಆಟೋ ಚಾಲಕ

ಕೇರಳದ ಕೊಟ್ಟಾಯಂ ಬಳಿಯ ಕಪಿಕ್ಕಾಡ್​ನ ಆಟೋ ರಿಕ್ಷಾ ಚಾಲಕ ಸುದರ್ಶನ ಎಂಬವರು ವಿಚಿತ್ರವಾಗಿ ಅಪಘಾತಕ್ಕೀಡಾಗಿದ್ದಾರೆ. ಇವರು ಆಟೋದಲ್ಲಿ ಹೋಗುತ್ತಿದ್ದ ವೇಳೆ ಮರದಿಂದ ಹಲಸಿನ ಹಣ್ಣು ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. 55 ವರ್ಷದ ಸುದರ್ಶನ್​ ಅವರ ತಲೆಯ ಮೇಲೆ ಹಲಸಿನ ಹಣ್ಣು ಬಿದ್ದಿದೆ. ಮಧುರವೇಲಿ – ಕುರುಪ್ಪಂತರ ರಸ್ತೆಯ ಪ್ಲಮೂಡ್​​ ಜಂಕ್ಷನ್​ನಲ್ಲಿ ಈ ಅವಘಡ ಸಂಭವಿಸಿದೆ. ಹಲಸಿನ ಹಣ್ಣು ಬಿದ್ದ ಪರಿಣಾಮ ಸುದರ್ಶನ್​ ಪ್ರಜ್ಞೆ ತಪ್ಪಿದ್ದಾರೆ. ಅದೃಷ್ಟವಶಾತ್​ ಆಟೋದಲ್ಲಿ ಯಾವುದೇ ಇತರೆ ಪ್ರಯಾಣಿಕರು ಇರಲಿಲ್ಲ.

ಕುರುಪ್ಪಂತಾರಾದಿಂದ ಮರುರವೇಲಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಅವಘಢ ಸಂಭವಿಸಿದೆ. ಡ್ರೈವರ್​ ಸೀಟಿನ ಮೇಲೆಯೇ ಸರಿಯಾಗಿ ಹಣ್ಣು ಬಿದ್ದಿದ್ದರ ಪರಿಣಾಮವಾಗಿ ಸುದರ್ಶನ್​ಗೆ ಪೆಟ್ಟಾಗಿದೆ. ಆಟೋದಲ್ಲಿ ಮೇಲ್ಚಾವಣಿ ತೆಳುವಾಗಿ ಇರೋದ್ರಿಂದ ನೇರವಾಗಿ ಹಲಸಿನ ಹಣ್ಣು ಸುದರ್ಶನ್​ ತಲೆ ಮೇಲೆಯೇ ಬಿದ್ದಿದೆ.

ಪ್ರಜ್ಞೆ ತಪ್ಪಿದ ಸುದರ್ಶನ್​ ರಸ್ತೆ ಮೇಲೆ ಬಿದ್ದಿದ್ದರು. ಕೂಡಲೇ ಸ್ಥಳೀಯರು ಅವರನ್ನ ಕೊಟ್ಟಾಯಂ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದರ್ಶನ್​ಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...