alex Certify ಕೇರಳದಲ್ಲಿ ಬಿಜೆಪಿಯನ್ನ ಬೆಂಬಲಿಸಲು ಷರತ್ತು ಹಾಕಿದ ಕ್ರೈಸ್ತ ಧರ್ಮಗುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳದಲ್ಲಿ ಬಿಜೆಪಿಯನ್ನ ಬೆಂಬಲಿಸಲು ಷರತ್ತು ಹಾಕಿದ ಕ್ರೈಸ್ತ ಧರ್ಮಗುರು

ಷರತ್ತಿನೊಂದಿಗೆ 2024ರ ಸಂಸತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಲು ಕೇರಳದ ಆರ್ಚ್ ಬಿಷಪ್ ವೊಬ್ಬರು ಬಹಿರಂಗವಾಗಿ ಹೇಳಿದ್ದಾರೆ.
ಕೇಂದ್ರವು ರಬ್ಬರ್ ಬೆಲೆ ಖರೀದಿ ದರವನ್ನು ಪ್ರತಿ ಕೆಜಿಗೆ 300 ರೂಪಾಯಿಗೆ ಹೆಚ್ಚಿಸಿದರೆ ಕೇರಳದಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲು ಸಹಾಯ ಮಾಡಲು ಕೇರಳದ ಪ್ರಭಾವಿ ಆರ್ಚ್ ಬಿಷಪ್ ಮುಂದಾಗಿದ್ದಾರೆ.

ಕಣ್ಣೂರು ಜಿಲ್ಲೆಯ ತಲಶ್ಶೇರಿ ಆರ್ಚ್‌ಡಯಾಸಿಸ್‌ನ ಮೆಟ್ರೋಪಾಲಿಟನ್ ಆರ್ಚ್‌ಬಿಷಪ್ ಜೋಸೆಫ್ ಪಂಪ್ಲಾನಿ ಅವರು ರಬ್ಬರ್ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರ ಪರವಾಗಿ ಪ್ರಸ್ತಾಪವನ್ನು ಮಾಡಲಾಗಿ0ದೆಯೇ ಹೊರತು ಕ್ಯಾಥೋಲಿಕ್ ಚರ್ಚ್ ಪರವಾಗಿ ಅಲ್ಲ ಎಂದಿದ್ದಾರೆ.

ಅವರ ಹೇಳಿಕೆಯನ್ನು ಸ್ವಾಗತಿಸಿರುವ ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್, ಈ ಸಲಹೆಗೆ ಕೇಂದ್ರವು ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಹೇಳಿದ್ದಾರೆ.

ಕೇರಳದ ಆಡಳಿತಾರೂಢ ಎಡರಂಗ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಕ್ರೈಸ್ತರನ್ನು ಮತ ಬ್ಯಾಂಕ್‌ನಂತೆ ನಡೆಸಿಕೊಳ್ಳುತ್ತಿದೆ. ಕೇಂದ್ರದಲ್ಲಿರುವ ಪಕ್ಷಕ್ಕೆ ಒಲವು ತೋರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಕ್ರಿಶ್ಚಿಯನ್ನರಿಗೆ ಅವುಗಳು ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದೆ.

ಕೇಂದ್ರ ಸಚಿವ ವಿ ಮುರಳೀಧರನ್ ಆರೋಪಿಸುತ್ತಾ ಎಡಪಕ್ಷಗಳು ಮತ್ತು ಕಾಂಗ್ರೆಸ್ ಬಿಜೆಪಿಯನ್ನು ಬೆಂಬಲಿಸುವ ಹೇಳಿಕೆಗಳನ್ನು ನೀಡುವ ಧಾರ್ಮಿಕ ಕ್ರಿಶ್ಚಿಯನ್ ನಾಯಕರನ್ನು ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿದರು. ಜೋಸೆಫ್ ಪಂಪ್ಲಾನಿ ಅವರ ಅಭಿಪ್ರಾಯಗಳಿಗಾಗಿ ಅವರನ್ನು ಗುರಿಯಾಗಿಸಲಾಗಿದೆ ಎಂದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...