
ಹಾಟ್ಸೀಟ್ನಲ್ಲಿ ಸ್ಥಾನ ಪಡೆದ ಸ್ಪರ್ಧಿಯು ಜಗತ್ತು ತುಂಬಾ ಚಿಕ್ಕದು ಎಂಬ ಮಾತನ್ನು ಅಮಿತಾಬ್ ಬಚ್ಚನ್ ಮುಂದೆ ಸಾಬೀತು ಪಡಿಸಿದ್ದಾರೆ. ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ರಶ್ಮಿ ಕದಮ್ ತಂದೆ 1992ರಲ್ಲಿ ಅಮಿತಾಬ್ ಬಚ್ಚನ್ರಿಗೆ ಬಾಡಿಗಾರ್ಡ್ ಆಗಿದ್ದರಂತೆ.
ಮನಃಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕಿಯಾಗಿರುವ ರಶ್ಮಿ ತಮ್ಮ ತಂದೆಯ ಬಗ್ಗೆ ಬಿಗ್ ಬಿಗೆ ಮಾಹಿತಿ ನೀಡಿದ್ರು. ಅಮಿತಾಬ್ ಬಚ್ಛನ್ ನೀವು ಪೊಲೀಸ್ ಅಧಿಕಾರಿಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಶ್ಮಿ ತಂದೆ ರಾಜೇಂದ್ರ ‘ಸರ್ ನಾನು 1992ರಲ್ಲಿ ನಿಮ್ಮ ಸೆಕ್ಯೂರಿಟಿ ಅಧಿಕಾರಿಯಾಗಿದ್ದೆ, ನಾನು ನಿಮ್ಮ ಬಾಡಿಗಾರ್ಡ್ ಆಗಿ ಕೆಲಸ ಮಾಡಿದ್ದೇನೆ’ ಎಂದು ಹೇಳಿದ್ದಾರೆ.
44 ಕೋಟಿ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ..! ನಾಳೆಯಿಂದ 3 ದಿನ ಈ ಸಮಯದಲ್ಲಿ ಹಣ ವರ್ಗಾವಣೆ ಸಾಧ್ಯವಿಲ್ಲ
ಇದನ್ನು ಕೇಳಿದ ಅಮಿತಾಬ್ ಬಚ್ಛನ್ ಶಾಕ್ ಆಗಿದ್ದಾರೆ. ನಿಮ್ಮೊಂದಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂಬ ಆಸೆ ನನಗೆ ಬಹಳ ವರ್ಷಗಳಿಂದ ಇತ್ತು. ಆದರೆ ಆಗೆಲ್ಲ ಮೊಬೈಲ್ನಲ್ಲಿ ಕ್ಯಾಮರಾ ಇರಲಿಲ್ಲ. ಆದರೆ ನಾನಿಂದು ಇಲ್ಲಿದ್ದೇನೆ. ನನ್ನ ಪುತ್ರಿಗೆ ಧನ್ಯವಾದ, ನನಗೆ ತುಂಬಾ ಖುಷಿಯಾಗಿದೆ ಎಂದು ರಾಜೇಂದ್ರ ಹೇಳಿದ್ದಾರೆ.