ಟೀಂ ಇಂಡಿಯಾದ ಮಾಜಿ ಆಟಗಾರರಾದ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸಿಂಗ್ ಸೆಹ್ವಾಗ್ ʼಕೌನ್ ಬನೇಗಾ ಕರೋಡ್ಪತಿʼ ಸೀಸನ್ 13ರ ವಿಶೇಷ ಎಪಿಸೋಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸೆಹ್ವಾಗ್ ಹಾಗೂ ಗಂಗೂಲಿ ಕ್ರಿಕೆಟ್ ಲೋಕದ ಸಾಕಷ್ಟು ಇಂಟರೆಸ್ಟಿಂಗ್ ಮಾಹಿತಿಯನ್ನು ಶೇರ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಂಗೂಲಿ ಹಾಗೂ ಸೆಹ್ವಾಗ್ 25 ಲಕ್ಷ ರೂಪಾಯಿ ಗಳಿಸಿದ್ದಾರೆ. ಈ ಹಣವನ್ನು ಲಾಭ ರಹಿತ ಉದ್ದೇಶಕ್ಕೆ ಬಳಸುವುದಾಗಿ ಹೇಳಿದ್ದಾರೆ.
ಆಟದ ವೇಳೆ ಗಂಗೂಲಿ ಹಾಗೂ ಸೆಹ್ವಾಗ್ ಎಲ್ಲಾ ನಾಲ್ಕು ಲೈಫ್ ಲೈನ್ನ್ನು ಬಳಸಿಕೊಂಡಿದ್ದಾರೆ. ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಲೈಫ್ ಲೈನ್ ಬಳಸಿಕೊಂಡಿದ್ದರು. ʼಟೀಂ ಇಂಡಿಯಾದ ಯಾವ ಮಾಜಿ ನಾಯಕ ಕೇವಲ ಟ್ರಾವಿಸ್ ಡೌವ್ಲಿನ್ರ ವಿಕೆಟ್ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ..?ʼ ಎಂಬ ಪ್ರಶ್ನೆಗೆ ಎಂ.ಎಸ್. ಧೋನಿ, ಮೊಹಮ್ಮದ್ ಅಜರುದ್ದೀನ್, ಸುನೀಲ್ ಗವಾಸ್ಕರ್ ಹಾಗೂ ರಾಹುಲ್ ದ್ರಾವಿಡ್ ಎಂಬ ನಾಲ್ಕು ಆಯ್ಕೆಯನ್ನು ನೀಡಲಾಗಿತ್ತು.
ಈ ಪ್ರಶ್ನೆಗೆ ಉತ್ತರ ನೀಡಲು ಗಂಗೂಲಿ ಹಾಗೂ ಸೆಹ್ವಾಗ್ ತಡಕಾಡಿದ್ದಾರೆ. ಗಂಗೂಲಿ, ಗವಾಸ್ಕರ್ ಎಂದು ಹೇಳಿದ್ರೆ ಅಜರುದ್ದೀನ್ ಎಂದು ಸೆಹ್ವಾಗ್ ಹೇಳಿದ್ದಾರೆ. ಆದರೆ ಈ ಎರಡೂ ಉತ್ತರದ ಬಗ್ಗೆಯೂ ಖಚಿತತೆ ಇಲ್ಲದ ಕಾರಣ ಲೈಫ್ ಲೈನ್ ಮೊರೆ ಹೋಗಿದ್ದರು .
ಲೈಫ್ಲೈನ್ನಲ್ಲಿ ಈ ಪ್ರಶ್ನೆಗೆ ಸರಿಯಾದ ಉತ್ತರ ಧೋನಿ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು, 2009ರ ಚಾಂಪಿಯನ್ ಟ್ರೋಫಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಪಂದ್ಯದಲ್ಲಿ ಧೋನಿ ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ನ್ನು ದಿನೇಶ್ ಕಾರ್ತಿಕ್ಗೆ ನೀಡಿದ ಧೋನಿ 2 ಓವರ್ಗಳಲ್ಲಿ ಡಾವ್ಲಿನ್ ವಿಕೆಟ್ ಕಬಳಿಸಿದ್ದರು.