alex Certify ಇದೇ ತಿಂಗಳ 23 ರಿಂದ ʼಕೌನ್ ಬನೇಗಾ ಕರೋಡ್ ಪತಿʼ ಸೀಸನ್-13 ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ತಿಂಗಳ 23 ರಿಂದ ʼಕೌನ್ ಬನೇಗಾ ಕರೋಡ್ ಪತಿʼ ಸೀಸನ್-13 ಶುರು

ಮುಂಬೈ: ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ಯ 13ನೇ ಸೀಸನ್ ಇದೇ ಆಗಸ್ಟ್ 23ರಿಂದ ಆರಂಭವಾಗಲಿದೆ. ಕಳೆದ ಬಾರಿಗಿಂತ ಈ ಬಾರಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.

12ನೇ ಆವೃತ್ತಿಯ ಈ ಕಾರ್ಯಕ್ರಮದಲ್ಲಿ ಸ್ಟುಡಿಯೋದಲ್ಲಿ ಪ್ರೇಕ್ಷಕರ ವೀಕ್ಷಣೆ ಇರಲಿಲ್ಲ. ಹೀಗಾಗಿ ಪ್ರಶ್ನಾವಳಿಯ ಸಂದರ್ಭದಲ್ಲಿ ವಿಶೇಷ ಆಯ್ಕೆ ಆಡಿಯನ್ಸ್ ಪೋಲ್ ಅಂದ್ರೆ ಪ್ರೇಕ್ಷಕರ ಉತ್ತರ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈ ಬಾರಿ ಇದನ್ನು ಅಳವಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

“ಇದು ‘ಕೌನ್ ಬನೇಗಾ ಕರೋಡ್ ಪತಿ’ಯೊಂದಿಗಿನ ನನ್ನ ಒಡನಾಟದ 21ನೇ ವರ್ಷವಾಗಿದೆ. ಬಹುಶಃ ಮೊದಲ ಬಾರಿಗೆ ಕಳೆದ ಸೀಸನ್ ನಲ್ಲಿ ಸ್ಟುಡಿಯೋದಲ್ಲಿ ಪ್ರೇಕ್ಷಕರು ಇರಲಿಲ್ಲ. ಪ್ರೇಕ್ಷಕರು ಕೂಡ ಈ ಕಾರ್ಯಕ್ರಮದ ಒಂದು ಭಾಗವಾಗಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿ ನಾವು ಪ್ರಮುಖ ಬದಲಾವಣೆಯನ್ನು ಮಾಡಬೇಕಾಯಿತು” ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.

ಇನ್ನು ಈ ಸೀಸನ್ ನಲ್ಲಿ ಸ್ಟುಡಿಯೋಗೆ ಪ್ರೇಕ್ಷಕರು ಮರಳಿ ಬರುತ್ತಿರುವುದಕ್ಕೆ ಬಿಗ್ ಬಿ ಸಂತಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಶ್ನಾವಳಿಯಲ್ಲಿ ಲೈಫ್ ಲೈನ್ ಆಡಿಯನ್ಸ್ ಪೋಲ್ ಅನ್ನು ಕೂಡ ಮತ್ತೆ ಅಳವಡಿಸಲಾಗುತ್ತಿದೆ. ಆಗಸ್ಟ್ 23ರಿಂದ ಈ ಶೋ ಸೋನಿ ಎಂಟರ್ಟೈನ್ ಮೆಂಟ್ ನಲ್ಲಿ ಪ್ರಾರಂಭವಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...