alex Certify ಕೇರಳದಿಂದ ಬರುವ ವಿದ್ಯಾರ್ಥಿ/ಉದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ: ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳದಿಂದ ಬರುವ ವಿದ್ಯಾರ್ಥಿ/ಉದ್ಯೋಗಿಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಮಾರ್ಗಸೂಚಿ: ಇಲ್ಲಿದೆ ಸಂಪೂರ್ಣ ಮಾಹಿತಿ

ಕೋವಿಡ್ ಸೋಂಕು ಹಬ್ಬುವುದನ್ನು ತಡೆಗಟ್ಟುವ ದೃಷ್ಟಿಯಿಂದ ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಕರ್ನಾಟಕ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು ಇಂತಿವೆ:

1. ಎಲ್ಲಾ ವಿದ್ಯಾರ್ಥಿಗಳು/ಉದ್ಯೋಗಿಗಳು ಕಡ್ಡಾಯವಾಗಿ 72 ಗಂಟೆಗಳಿಗಿಂತ ಹಳೆಯದಲ್ಲದ ನೆಗೆಟಿವ್‌ ಆರ್‌ಟಿ-ಪಿಸಿಆರ್‌‌ ಪ್ರಮಾಣ ಪತ್ರಗಳನ್ನು ತಮ್ಮೊಂದಿಗೆ ತರಬೇಕು. ಕೋವಿಡ್ ಲಸಿಕೆ ತೆಗೆದುಕೊಂಡಿರುವುದು ಈ ವಿಷಯದಲ್ಲಿ ಗಣನೆಗೆ ಬರುವುದಿಲ್ಲ. ಪ್ರಮಾಣಪತ್ರದ ವಾಯಿದೆ ಒಂದು ವಾರದ ಮಟ್ಟಿಗೆ ಇರಲಿದೆ.

a. ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆಯನ್ನು ಆಯಾಯಾ ಶಿಕ್ಷಣ ಸಂಸ್ಥೆಗಳ ಆಡಳಿತಗಳೇ ನೋಡಿಕೊಳ್ಳಬೇಕು.

b. ಉದ್ಯೋಗಿಗಳ ವಿಚಾರದಲ್ಲಿ, ಸಂಬಂಧಪಟ್ಟ ಕಂಪನಿಗಳು ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು.

c. ಯಾವುದೇ ಕಾರಣಕ್ಕೂ ಮನೆಯಲ್ಲಿ ಐಸೋಲೇಟ್ ಆಗಲು ಬಿಡುವುದಿಲ್ಲ.

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ಹೋಗಿ ಬಂದ ಪೊಲೀಸ್ ಗೆ ಬಿಗ್ ಶಾಕ್

2. ಏಳು ವಾರಗಳ ಸಾಂಸ್ಥಿಕ ಕ್ವಾರಂಟೈನ್ ಮುಗಿದ ಬಳಿಕ ಪ್ರತಿಯೊಬ್ಬರಿಗೂ ಆರ್‌ಟಿ-ಪಿಸಿಆರ್‌ ಕಡ್ಡಾಯ. ಪರೀಕ್ಷೆ ವೇಳೆ ರೋಗಲಕ್ಷಣಗಳು ಕಂಡುಬಂದಲ್ಲಿ ವೈದ್ಯಕೀಯ ಸೂಚನೆಗಳನ್ನು ಪಡೆದು, ರಾಜ್ಯ ಸರ್ಕಾರದ ಆದೇಶಗಳನ್ನು ಪಾಲನೆ ಮಾಡಬೇಕು.

3. ಆರ್‌ಟಿ-ಪಿಸಿಆರ್‌‌ನಲ್ಲಿ ಪಾಸಿಟಿವ್‌ ಕಂಡುಬಂದ ವ್ಯಕ್ತಿಯನ್ನು ಹಾಗೂ ಅವರೊಂದಿಗೆ ಸಂಪರ್ಕಕ್ಕೆ ಬಂದ ಮಂದಿಯನ್ನು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು.

4. ಎರಡನೇ ಡೋಸ್ ಪಡೆದ ಬಳಿಕವೂ ಸೋಂಕು ತಗುಲಿದಲ್ಲಿ, ಅಂಥವರ ಸ್ಯಾಂಪಲ್‌ಗಳನ್ನು ಕಡ್ಡಾಯವಾಗಿ ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗುವುದು.

5. ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಪ್ರಮಾಣ ಪತ್ರ ಇರುವ ಮಂದಿ ತಂತಮ್ಮ ಮನೆಗಳಲ್ಲಿ ಒಂದು ವಾರದ ಮಟ್ಟಿಗೆ ಕಡ್ಡಾಯವಾಗಿ ಐಸೋಲೇಟ್ ಆಗಬೇಕು.

ಕೆಳಕಂಡ ಪರಿಸ್ಥಿತಿಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗುವುದು:

1. ಸಾಂವಿಧಾನಿಕ ಸಿಬ್ಬಂದಿ, ಆರೋಗ್ಯ ಸೇವಾ ಸಿಬ್ಬಂದಿ ಹಾಗೂ ಅವರ ಕುಟುಂಬವರ್ಗ.

2. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು.

3. ತೀರಾ ತುರ್ತು ಪರಿಸ್ಥಿತಿ (ಕುಟುಂಬದಲ್ಲಿ ಸಾವು, ವೈದ್ಯಕೀಯ ಚಿಕಿತ್ಸೆ ಇತರೆ).

4. ಅಲ್ಪಾವಧಿ ಪ್ರಯಾಣಿಕರು (ಮೂರು ದಿನಕ್ಕಿಂತ ಕಡಿಮೆ).

5. ತಲಾ ಒಬ್ಬರು ಪೋಷಕರೊಂದಿಗೆ ಪರೀಕ್ಷೆಗೆ ಹಾಜರಾಗಲು ಕರ್ನಾಟಕಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿಗಳು (3 ದಿನಗಳ ಒಳಗೆ).

6. ಯಾವುದೇ ರೀತಿಯ ಸಾರಿಗೆ ಮೂಲಕ ಕೇರಳವನ್ನು ಹಾಯ್ದು ಬರುವ ಪ್ರಯಾಣಿಕರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...