alex Certify ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ಹೋಗಿ ಬಂದ ಪೊಲೀಸ್ ಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ಹೋಗಿ ಬಂದ ಪೊಲೀಸ್ ಗೆ ಬಿಗ್ ಶಾಕ್

ಯಾದಗಿರಿ: ಅಕ್ರಮ ಸಂಬಂಧದ ವಿಚಾರಕ್ಕೆ ಪೊಲೀಸ್ ಕಾನ್ಸ್ಟೇಬಲ್ ಗೆ ಧರ್ಮದೇಟು ನೀಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಪೊಲೀಸ್ ಕಾನ್ಸ್ಟೇಬಲ್ ಕೈಕಾಲು ಕಟ್ಟಿ ಆತನ ಕುಟುಂಬದವರು ಥಳಿಸಿದ್ದಾರೆ.

ನೆರವಿಗೆ ಮನವಿ ಮಾಡಿದರೂ ಯಾರೂ ಕೂಡ ಪೊಲೀಸರಿಗೆ ಸ್ಪಂದಿಸಿಲ್ಲ. ಬುಧವಾರ ಸಂಜೆ ಪೊಲೀಸ್ ಕಾನ್ಸ್ಟೇಬಲ್ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ಹೋಗಿ ವಾಪಸ್ ಬಂದ ಕೂಡಲೇ ಕುಟುಂಬದವರು ಹಲ್ಲೆ ಮಾಡಿದ್ದಾರೆ. ಅನೇಕ ಸಲ ಬುದ್ಧಿವಾದ ಹೇಳಿದ್ದರೂ, ಪೊಲೀಸ್ ತನ್ನ ಚಾಳಿ ಬಿಟ್ಟಿರಲಿಲ್ಲ. ಹೀಗಾಗಿ ಕೈಕಾಲು ಕಟ್ಟಿ ಧರ್ಮದೇಟು ನೀಡಲಾಗಿದೆ. ಆದರೆ, ಈ ಕುರಿತಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸ್ ಅಧೀಕ್ಷಕರ ಕಚೇರಿ ಸಮೀಪದಲ್ಲೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...