alex Certify ʼಯೋಗʼ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಯೋಗʼ ಮಾಡುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

Yoga is For Everyone': Bangalore Based Influencer On Why We Must ...

ಯೋಗಾಸನ ನಿತ್ಯ ಜೀವನಕ್ಕೆ ಅತ್ಯಾವಶ್ಯಕ. ಅದರಲ್ಲೂ ಕೊರೋನಾದಂತಹ ಸಾಂಕ್ರಾಮಿಕ ರೋಗ ಕಾಲದಲ್ಲಿ ಇನ್ನಷ್ಟು ಅನಿವಾರ್ಯ ಕೂಡ.

ದೇಹ ಮತ್ತು ಮನಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಲು ಸಾಧನದಂತಿರುವ ಆಸನ, ಪ್ರಾಣಾಯಾಮ, ಧ್ಯಾನವು, ಆಂತರ್ಯದಲ್ಲಿನ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಬೆಂಗಳೂರಿನ 33 ರ ಹರೆಯದ ಯೋಗಗುರು ಮೋನಿಕಾ ರೈ, ಒಂದು ಕಾಲದಲ್ಲಿ ಹಾರ್ಮೋನುಗಳ ಅಸಮತೋಲನದಿಂದ ಖಿನ್ನತೆಗೊಳಗಾಗಿದ್ದರು.

ಇದರಿಂದ ಹೊರಬರಲು ಅವರು ಬಾಲ್ಯದಿಂದಲೇ ಕಂಡುಕೊಂಡ ಮಾರ್ಗವೇ ಯೋಗಾಭ್ಯಾಸ. ಇದೀಗ ಅವರೇ ಅನೇಕರಿಗೆ ಯೋಗಾಸನಗಳನ್ನು ಹೇಳಿಕೊಡಲಾರಂಭಿಸಿದ್ದಾರೆ.

ಯೋಗದ ಮಹತ್ವ ತಿಳಿಸಿಕೊಡುತ್ತಿದ್ದು, ಇನ್ ಸ್ಟಾಗ್ರಾಮ್ ನಲ್ಲಿ ʼಯೋಗ ವಿಥ್ ಮೋನಿಕಾ ಪೇಜ್ʼ ನಲ್ಲಿ ಮಾನಸಿಕ ಒತ್ತಡಗಳಿಂದ ಹೊರಬರಲು ಯೋಗದ ಸಾಮರ್ಥ್ಯವನ್ನು ವಿವರಿಸಿದ್ದಾರೆ.

ಯೋಗ ಕೇವಲ ಸೀಮಿತವಾದದ್ದಲ್ಲ. ಪ್ರತಿಯೊಬ್ಬರ ಜೀವನಕ್ಕೂ ಆವಶ್ಯಕ. ಎಲ್ಲರೂ ಪ್ರತಿನಿತ್ಯದ ಜೀವನಶೈಲಿಯಲ್ಲಿ ಯೋಗಾಸನವನ್ನು ಅಭ್ಯಾಸವಾಗಿ ಇಟ್ಟುಕೊಳ್ಳಲೇಬೇಕು ಎನ್ನುತ್ತಾರೆ ಅವರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...