alex Certify ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ ಮಾಡಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ ಮಾಡಿದ್ದೇನು…?

ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ತುಮಕೂರಿನ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಾಲೆಯಲ್ಲಿಯೇ ಕಂಠಪೂರ್ತಿ ಮದ್ಯ ಸೇವಿಸಿ ಪಾರ್ಟಿ ಮಾಡಿರುವ ಆರೋಪ ಕೇಳಿ ಬಂದಿದೆ.

ಕೊರೋನಾ ಕಾರಣದಿಂದಾಗಿ ಶಾಲೆಗೆ ಶಿಕ್ಷಕರು ಮಾತ್ರ ಬರುತ್ತಿದ್ದು, ಮುಖ್ಯಶಿಕ್ಷಕ ಅನೇಕ ದಿನಗಳಿಂದ ಶಾಲೆಯಲ್ಲಿಯೇ ಮದ್ಯ ಸೇವಿಸಿದ್ದಾನೆ. ಕೆಲವು ಶಿಕ್ಷಕರೊಂದಿಗೆ ಪಾರ್ಟಿ ಮಾಡಿ ಮೋಜು-ಮಸ್ತಿ ನಡೆಸಲಾಗಿದೆ ಎಂದು ಹೇಳಲಾಗಿದೆ.

ಶಾಲೆಯಲ್ಲಿ ಮದ್ಯ ಸೇವಿಸಿದ ಮುಖ್ಯಶಿಕ್ಷಕ ಅಲ್ಲೇ ಮಲಗಿದ್ದಾನೆ. ಕೊಠಡಿಯಲ್ಲಿ ಮದ್ಯದ ಬಾಟಲಿಗಳು ಕಂಡು ಬಂದಿವೆ. ಗ್ರಾಮಸ್ಥರೊಬ್ಬರು ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ. ಮುಖ್ಯ ಶಿಕ್ಷಕನನ್ನು ಅಮಾನತು ಮಾಡಬೇಕೆಂದು ಗ್ರಾಮಸ್ಥರು ಮತ್ತು ಪೋಷಕರು ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...