alex Certify ಜನ ಮರುಳೋ ಜಾತ್ರೆ ಮರುಳೋ..? ಕುದುರೆ ಅಂತ್ಯಕ್ರಿಯೆಗೆಂದು ಲಾಕ್​ಡೌನ್​ ನಿಯಮ ಮುರಿದ ಜನತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ ಮರುಳೋ ಜಾತ್ರೆ ಮರುಳೋ..? ಕುದುರೆ ಅಂತ್ಯಕ್ರಿಯೆಗೆಂದು ಲಾಕ್​ಡೌನ್​ ನಿಯಮ ಮುರಿದ ಜನತೆ..!

ಕೊರೊನಾ ಎರಡನೆ ಅಲೆಯನ್ನ ತಡೆಯಲಿಕ್ಕೋಸ್ಕರ ರಾಜ್ಯದಲ್ಲಿ ಲಾಕ್​ಡೌನ್​ ಅವಧಿಯನ್ನ ವಿಸ್ತರಿಸಲಾಗಿದೆ. ಕಡ್ಡಾಯ ಮಾಸ್ಕ್​ ಬಳಕೆ, ಸಾಮಾಜಿಕ ಅಂತರ ಪಾಲನೆ, ಮದುವೆ ಹಾಗೂ ಅಂತ್ಯಕ್ರಿಯೆಯಂತಹ ಕಾರ್ಯಕ್ರಮಗಳಿಗೆ ಜನಮಿತಿ ಸೇರಿದಂತೆ ಸಾಕಷ್ಟು ನಿರ್ಬಂಧಗಳನ್ನ ವಿಧಿಸಲಾಗಿದೆ.

ಆದರೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಅಂತ್ಯಕ್ರಿಯೆ ಕಾರ್ಯಕ್ರಮವೊಂದರಲ್ಲಿ ಲಾಕ್​ಡೌನ್​ ನಿಯಮಗಳನ್ನ ಗಾಳಿಗೆ ತೂರಲಾಗಿದೆ. ಮರಡಿಮಠ ಏರಿಯಾದಲ್ಲಿ ನಡೆದ ಕುದುರೆಯ ಅಂತ್ಯಕ್ರಿಯೆಯಲ್ಲಿ ನೂರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದಾರೆ. ಮಾಸ್ಕ್​ ಹಾಕಿಕೊಳ್ಳದೇ ಸಾಮಾಜಿಕ ಅಂತರ ಪಾಲನೆ ಮಾಡದೇ ಜನರು ಓಡಾಡಿದ್ದಾರೆ.

ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಈ ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದು, ಈ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದ್ದಾರೆ. ಇತ್ತ ಸಾರ್ವಜನಿಕರು ಸಹ ಸೋಶಿಯಲ್ ಮೀಡಿಯಾದಲ್ಲಿ ಜನರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

— ANI (@ANI) May 24, 2021

https://twitter.com/ekintrepid/status/1396703952406650881

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...