alex Certify ಕೊರೊನಾ ನಿಯಂತ್ರಣಕ್ಕಾಗಿ ಬೆಂಗಳೂರು ಸಂಸ್ಥೆಯಿಂದ ಸ್ವಯಂ ಚಾಲಿತ ಟನಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಿಯಂತ್ರಣಕ್ಕಾಗಿ ಬೆಂಗಳೂರು ಸಂಸ್ಥೆಯಿಂದ ಸ್ವಯಂ ಚಾಲಿತ ಟನಲ್…!

ವಿಶ್ವದಲ್ಲಿ ಕೊರೋನಾ ಕಾಣಿಸಿಕೊಂಡಾಗಿನಿಂದ ದಿನಕ್ಕೊಂದು ಆವಿಷ್ಕಾರ ನಡೆಯುತ್ತಲೇ ಇದೆ. ಅದರಲ್ಲೂ ಕೊರೋನಾದಿಂದ ತಪ್ಪಿಸಿಕೊಳ್ಳಲು ಅಗತ್ಯವಿರುವ ವಿಷಯಕ್ಕೆ ಸಂಬಂಧಿಸಿದಂತೆ ನೂರಾರು ಅನ್ವೇಷಣೆಗಳು ನಡೆದಿದ್ದು, ಇದೀಗ ಬೆಂಗಳೂರಿನ ಯುವಕರ ತಂಡ ರೋಗ ನಿರೋಧಕ ಔಷಧ ಸಿಂಪಡಿಸುವ ಸ್ವಯಂಚಾಲಿತ ಟನಲ್‌ ಅಭಿವೃದ್ಧಿಪಡಿಸಿದೆ.

ಬೆಂಗಳೂರಿನ ಸ್ಟಾರ್ಟ್‌ ಅಪ್‌ ಸಂಸ್ಥೆಯೊಂದು ಈ ಟನಲ್‌ ಅಭಿವೃದ್ಧಿಪಡಿಸಿದ್ದು ಇದಕ್ಕೆ ವಿಮರ್ಜನ್‌ 3.0 ಎಂದು ಹೆಸರಿಡಲಾಗಿದೆ. ಈ ಆಟೋಮ್ಯಾಟಿಕ್‌ ಔಷಧ ಸಿಂಪಡಿಸುವ ಟನಲ್‌ನಿಂದ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎನ್ನುವ ಮಾತನ್ನು ಸಂಸ್ಥೆ ಹೇಳಿದೆ.

ಪ್ರಮುಖವಾಗಿ ಮಾಲ್‌, ಮಾರ್ಕೆಟ್‌ ಹಾಗೂ ಹೆಚ್ಚು ಜನ ಓಡಾಡುವ ಪ್ರದೇಶದಲ್ಲಿ ಸ್ಯಾನಿಟೈಸ್ ಅಗತ್ಯವಿದೆ. ಇಂತಹ ಕಡೆ ಪ್ರತಿಯೊಬ್ಬರನ್ನು ಸ್ಯಾನಿಟೈಸ್‌ ಮಾಡುವುದು‌ ಕಷ್ಟ. ಈ ಎಲ್ಲ ತಾಪತ್ರಯವನ್ನು ಈ ವಿನೂತನ ಟನಲ್‌ ತಪ್ಪಿಸಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...