alex Certify ಯುವತಿಗೆ ವಿಡಿಯೋ ತೋರಿಸಿ ದೈಹಿಕ ಸಂಪರ್ಕಕ್ಕೆ ಪೀಡಿಸಿದ ವೈದ್ಯ ವಿದ್ಯಾರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಗೆ ವಿಡಿಯೋ ತೋರಿಸಿ ದೈಹಿಕ ಸಂಪರ್ಕಕ್ಕೆ ಪೀಡಿಸಿದ ವೈದ್ಯ ವಿದ್ಯಾರ್ಥಿ

ಬೆಂಗಳೂರು: ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು ದೈಹಿಕ ಸಂಪರ್ಕ ಬೆಳೆಸಲು ಪೀಡಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬನ ವಿರುದ್ಧ ಕಿರುಕುಳ ನೀಡಿದ ಆರೋಪದ ಮೇಲೆ ದೂರು ದಾಖಲಾಗಿದೆ.

ಮಾರತಹಳ್ಳಿಯ ನಿವಾಸಿಯಾಗಿರುವ 20 ವರ್ಷದ ಯುವತಿ ಮೈಸೂರು ಮೂಲದ ವೈದ್ಯಕೀಯ ವಿದ್ಯಾರ್ಥಿ ರಾಬರ್ಟ್ ರೋಷನ್ ಎಂಬುವನ ವಿರುದ್ಧ ವೈಟ್ ಫೀಲ್ಡ್ ಸಿಇಇಎನ್ ಪೊಲೀಸರಿಗೆ ದೂರು ನೀಡಿದ್ದಾಳೆ.

ಇನ್ಸ್ಟಾಗ್ರಾಮ್ ನಲ್ಲಿ ಕೆಲವು ತಿಂಗಳ ಹಿಂದೆ ಪರಿಚಿತನಾಗಿದ್ದ ಆರೋಪಿ ತಾನು ವೈದ್ಯಕೀಯ ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದ. ಪ್ರತಿದಿನ ಯುವತಿಯೊಂದಿಗೆ ಚಾಟ್ ಮಾಡುತ್ತಿದ್ದು, ನಂತರದಲ್ಲಿ ಇಬ್ಬರು ಸ್ನೇಹಿತರಾಗಿದ್ದಾರೆ. ಮಾರ್ಚ್ ನನಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ ಯುವತಿಯೊಂದಿಗೆ ಸುತ್ತಾಡಿದ್ದಾನೆ. ಆಕೆಯೊಂದಿಗಿದ್ದ ಫೋಟೋಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ.

ಬಳಿಕ ಫೋಟೋಗಳನ್ನು ಕಳುಹಿಸಿ ಅಶ್ಲೀಲವಾಗಿ ಚಾಟಿಂಗ್ ಮಾಡುತ್ತಿದ್ದ ಆತ ದೈಹಿಕ ಸಂಪರ್ಕ ಬೆಳೆಸುವಂತೆ ಬಲವಂತ ಮಾಡಿದ್ದಾನೆ. ಅಲ್ಲದೆ ಸಹೋದರಿಯ ಖಾಸಗಿ ಫೋಟೋ ಕಳುಹಿಸಿಕೊಡುವಂತೆ ಯುವತಿಗೆ ಪೀಡಿಸಿದ್ದಾನೆ. ಆತನ ಕಿರುಕುಳ ಹೆಚ್ಚಾಗಿದ್ದರಿಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...