alex Certify BIG BREAKING: ಬಾರ್, ಶಾಲಾ – ಕಾಲೇಜ್ ಓಪನ್ ಇಲ್ಲ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಬಾರ್, ಶಾಲಾ – ಕಾಲೇಜ್ ಓಪನ್ ಇಲ್ಲ, ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರದಿಂದ ಅನ್ಲಾಕ್ 3.0 ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಆಗಸ್ಟ್ 31ರ ವರೆಗೆ ಶಾಲಾ -ಕಾಲೇಜುಗಳನ್ನು ತೆರೆಯುವಂತಿಲ್ಲ ಎಂದು ತಿಳಿಸಲಾಗಿದೆ.

ಆಗಸ್ಟ್ 5 ರಿಂದ ರಾಜ್ಯದಲ್ಲಿ ಜಿಮ್ ಗಳ ಓಪನ್ ಗೆ ಅವಕಾಶ ನೀಡಲಾಗಿದೆ. ಜಿಮ್, ಯೋಗ ಸೆಂಟರ್ ಓಪನ್ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಸಿನಿಮಾ ಮಂದಿರ, ಮೆಟ್ರೋ, ಈಜುಕೊಳ ಬಂದ್ ಮುಂದುವರೆಯಲಿದೆ.

ಬಾರ್ ಗಳನ್ನು ಕೂಡ ತೆರೆಯುವಂತಿಲ್ಲ ಎಂದು ಸೂಚನೆ ನೀಡಲಾಗಿದ್ದು, ಕ್ರೀಡಾ ಚಟುವಟಿಕೆಗಳಿಗೆ ಸದ್ಯಕ್ಕೆ ಅನುಮತಿ ಇಲ್ಲ. ಮನರಂಜನೆ ಪಾರ್ಕ್, ಅಸೆಂಬ್ಲಿ ಹಾಲ್ ಗಳು, ರಾಜಕೀಯ, ಧಾರ್ಮಿಕ ಸಭೆ, ಸಮಾರಂಭ ನಡೆಸುವಂತಿಲ್ಲ. ಸ್ವಾತಂತ್ರ್ಯ ದಿನಾಚರಣೆಗೆ ಅನುಮತಿ ನೀಡಲಾಗಿದೆ. ದೈಹಿಕ ಅಂತರ ಮತ್ತು ಮಾಸ್ಕ್ ಧರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...