ಬೆಂಗಳೂರಿನ ಯಶವಂತಪುರದಲ್ಲಿ 17 ವರ್ಷದ ಯುವಕನನ್ನ ಕೊಲೆ ಮಾಡಿದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರತ್ಯಕ್ಷದರ್ಶಿಗಳು ನೀಡಿದ ವಿಡಿಯೋ ಆಧಾರದ ಮೇಲೆ ಕೊಲೆಗಾರರನ್ನ ಗುರುತಿಸಿದ ಪೊಲೀಸರು ಅವರನ್ನ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ, ಕೊಲೆಯಾದ ಫೈಜ್ ಕೂಡ ಇದೇ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು ಯಶವಂತಪುರದ ಸುಬೇದಾರಪಾಳ್ಯದ ನಿವಾಸಿಯಾಗಿದ್ದ. ಪ್ರಕರಣದ ಪ್ರಮುಖ ಆರೋಪಿ ಕೂಡ ಇದೇ ಏರಿಯಾದವನಾಗಿದ್ದರೆ ಕೃತ್ಯಕ್ಕೆ ಸಾಥ್ ನೀಡಿದ ಆತನ ಸ್ನೇಹಿತ ಲಗ್ಗೇರಿ ನಿವಾಸಿಯಾಗಿದ್ದಾನೆ. ಕ್ಷುಲಕ ವಿಚಾರಕ್ಕಾಗಿ ನಡೆದಿದ್ದ ರಾಜಿ ಸಂಧಾನ ವಿಚಾರದ ಬಳಿಕ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಿದ್ದಾರೆ.
ಜೀವನ ನಿರ್ವಹಣೆಗೆ ಪೋಷಕರು ನೀಡಲಿ ಹಣ – ನ್ಯಾಯಾಲಯಕ್ಕೆ ನಿರುದ್ಯೋಗಿ ಪುತ್ರನ ಮೊರೆ
ಸುಬೇದಾರ ಪಾಳ್ಯದಲ್ಲಿ ಆರೋಪಿಗಳು ಧೂಮಪಾನ ಮಾಡುತ್ತಿದ್ದ ವೇಳೆ ಫೈಜ್ ಗುರಾಯಿಸಿದ್ದ ಅನ್ನೋದೇ ಈ ಕೊಲೆಗೆ ಮುಖ್ಯ ಕಾರಣವಂತೆ..! ಫೈಜ್ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಹೊಂಚು ಹಾಕಿದ್ದ ಆರೋಪಿಗಳು ಆತನನ್ನ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.