
ಮೋನಾ ಪಟೇಲ್ ಎಂಬವರು ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ವೈರಲ್ ವಿಡಿಯೋದಲ್ಲಿ ವಾಹನವನ್ನ ಹುಲಿ ಕಚ್ಚುತ್ತಿರುವ ದೃಶ್ಯವನ್ನ ನೋಡಬಹುದಾಗಿದೆ. ವಿಡಿಯೋ ನೋಡ್ತಿದ್ರೆ ಹುಲಿಯೇ ಕಾರನ್ನ ಎಳೆಯುತ್ತಿದೆ ಎಂದು ಭಾಸವಾಗುತ್ತೆ. ಆದರೆ ಕಾರೊಳಗಿದ್ದ ಚಾಲಕ ಗಾಡಿಯನ್ನ ಹಿಂದಕ್ಕೆ ತಂದಿದ್ದಾನೆ ಎಂದು ನೆಟ್ಟಿಗರು ಹೇಳಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಬಹುಶಃ ಹುಲಿಗೆ ಹಸಿವಾಗಿರಬಹುದು ಎಂದು ಅಂದಾಜಿಸಿದ್ದಾರೆ. ಅಲ್ಲದೇ ಹುಲಿಯನ್ನ ನೋಡಿದ ಬಳಿಕವೂ ಹುಲಿಯ ಸಮೀಪಕ್ಕೇ ಕಾರನ್ನ ತರುತ್ತಿರುವ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.