ಕರ್ನಾಟಕದ ರೈತರೊಬ್ಬರು ವೈಜ್ಞಾನಿಕ ಮಾದರಿಯಲ್ಲಿ ಹಳದಿ ಬಣ್ಣದ ಕಲ್ಲಂಗಡಿಯನ್ನ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊರಲಿ ಗ್ರಾಮದ ಬಸವರಾಜ್ ಪಾಟೀಲ್ ಎಂಬ ಪದವೀಧರ ರೈತ, ಈ ಹಳದಿ ಬಣ್ಣದ ಕಲ್ಲಂಗಡಿ ಹಣ್ಣನ್ನು ಸ್ಥಳೀಯ ಮಾರುಕಟ್ಟೆ ಹಾಗೂ ಬಿಗ್ ಬಜಾರ್ನಲ್ಲಿ ಮಾರಾಟ ಮಾಡ್ತಿದ್ದಾರೆ.
ವೈಜ್ಞಾನಿಕವಾಗಿ ರೂಪಿಸಿದ ಹಳದಿ ಕಲ್ಲಂಗಡಿ ಹಣ್ಣಿನಿಂದ ಪಾಟೀಲ್ ತುಂಬಾನೇ ಲಾಭ ಪಡೆದಿದ್ದಾರೆ. ಈ ಕಲ್ಲಂಗಡಿ ಹಣ್ಣನ್ನ ಪಡೆಯಲಿಕ್ಕಾಗಿ ಬಸವರಾಜ್ ಪಾಟೀಲ್ 2 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದರು. ಈಗಾಗಲೇ ಅವರು 1 ಲಕ್ಷ ರೂಪಾಯಿ ಲಾಭವನ್ನ ಪಡೆದಿದ್ದಾರೆ.
ಈ ಹಳದಿ ಕಲ್ಲಂಗಡಿ ಹಣ್ಣುಗಳು ಕೆಂಪು ಕಲ್ಲಂಗಡಿ ಹಣ್ಣಿಗಿಂತ ಹೆಚ್ಚು ಸಿಹಿಯಾಗಿರುತ್ತದೆ ಎಂದು ಬಸವರಾಜ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ನಮ್ಮ ಬೆಳೆಯನ್ನ ವಿಶೇಷವಾಗಿ ಉತ್ಪಾದನೆ ಮಾಡಿದ್ರೆ ಮಾತ್ರ ಕೃಷಿ ಕ್ಷೇತ್ರದಲ್ಲಿ ಲಾಭ ಪಡೆಯಲು ಸಾಧ್ಯ ಅಂತಾ ಬಸವರಾಜ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .